ADVERTISEMENT

ಬೀಳ್ಕೊಡುಗೆ ನಿರಾಕರಿಸಿದ ನ್ಯಾ. ಚೆಲಮೇಶ್ವರ್‌

ಪಿಟಿಐ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಚೆಲಮೇಶ್ವರ್‌
ಚೆಲಮೇಶ್ವರ್‌   

ನವದೆಹಲಿ: ಸುಪ್ರೀಂ ಕೋರ್ಟ್‌ ವಕೀಲರ ಸಂಘ ನೀಡಲು ಬಯಸಿದ್ದ ಬೀಳ್ಕೊಡುಗೆಯನ್ನು ಹಿರಿಯ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ನಿರಾಕರಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಜೆ. ಚೆಲಮೇಶ್ವರ್‌ ಜೂನ್‌ 22ರಂದು ನಿವೃತ್ತರಾಗಲಿರುವುದರಿಂದ ವಕೀಲರ ಸಂಘ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿತ್ತು.

ವೈಯಕ್ತಿಕ ಕಾರಣದಿಂದಾಗಿ ಚೆಲಮೇಶ್ವರ್ ಅವರು ಬೀಳ್ಕೊಡುಗೆ ನಿರಾಕರಿಸಿದ್ದಾರೆ ಎಂದು ವಕೀಲರ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಮನವೊಲಿಕೆ ಯತ್ನ ವಿಫಲ: ಕಳೆದ ವಾರ ಚೆಲಮೇಶ್ವರ್ ಅವರನ್ನು ಭೇಟಿಯಾಗಿದ್ದ ಸಂಘದ ಪದಾಧಿಕಾರಿಗಳು ಮೇ 18ಕ್ಕೆ ನಿಗದಿಯಾಗಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಆದರೆ, ಅವರು ಆಹ್ವಾನ ಒಪ್ಪಿಕೊಂಡಿರಲಿಲ್ಲ. ಕೋರ್ಟ್‌ ರಜಾ ಅವಧಿಯಲ್ಲಿ ನಿವೃತ್ತರಾಗುವ ನ್ಯಾಯಮೂರ್ತಿಗಳಿಗೆ ರಜೆ ಆರಂಭವಾಗುವ ಮೊದಲೇ ಬೀಳ್ಕೊಡುಗೆ ನೀಡುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.