ADVERTISEMENT

ಬುಧವಾರ ತ್ರಿವೇದಿ ಚೊಚ್ಚಲ ರೈಲ್ವೆ ಬಜೆಟ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 10:00 IST
Last Updated 13 ಮಾರ್ಚ್ 2012, 10:00 IST

ನವದೆಹಲಿ (ಐಎಎನ್ಎಸ್): ರೈಲ್ವೇ ಸಚಿವ ದಿನೇಶ್ ತ್ರಿವೇದಿ ಅವರು 2012-13ರ ಸಾಲಿಗಾಗಿ  ಬುಧವಾರ ತಮ್ಮ ಚೊಚ್ಚಲ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
 
ಪ್ರತಿದಿನ 64,000 ಕಿ.ಮೀ. ಉದ್ದದ ಹಳಿಗಳ ಮೇಲೆ 10,500 ರೈಲುಗಾಡಿಗಳನ್ನು ಓಡಿಸಿ 220 ಲಕ್ಷ ಪ್ರಯಾಣಿಕರಿಗೆ ಪ್ರಯಾಣಾವಕಾಶ ಕಲ್ಪಿಸುತ್ತಿರುವ ರೈಲ್ವೇಯು ಹಣದ ಮುಗ್ಗಟ್ಟು ಎದುರಿಸುತ್ತಿದ್ದು ಅಂದಾಜು 7000 ಕೋಟಿ ರೂಪಾಯಿಗಳ ಕೊರತೆ ಎದುರಿಸುತ್ತಿದೆ.
 
ಹೀಗಿದ್ದರೂ ಪ್ರಯಾಣದರಗಳನ್ನು ಸಚಿವರು ಏರಿಸುವ ಸಾಧ್ಯತೆಗಳಿಲ್ಲ, ಆದರೆ ಶ್ರೀಮಂತ ವರ್ಗದ ಪಯಣದ ಮೇಲೆ ತೆರಿಗೆ ಏರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಳಪೆ ಹಣಕಾಸು ನಿರ್ವಹಣೆ ಪರಿಣಾಮವಾಗಿ ಭಾರತೀಯ ರೈಲ್ವೆಯು ಕಳೆದ ವರ್ಷ 20,000 ಕೋಟಿ ರೂಪಾಯಿಗಳ ಬಜೆಟ್ ನೆರವು ಹಾಗೂ ಹಣಕಾಸು ಸಚಿವಾಲಯವು ಫೆಬ್ರುವರಿ 6ರಂದು ಮಂಜೂರು ಮಾಡಿದ 3000 ಕೋಟಿ ರೂಪಾಯಿಗಳ ಸಾಲದ ಹೊರತಾಗಿಯೂ ಗಣನೀಯ ಆದಾಯ ಕುಸಿತವನ್ನು ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.