ADVERTISEMENT

ಬೊಕ್ಕಸಕ್ಕೆ ನಷ್ಟ: ಡಿಜಿಸಿಎ ಹಿರಿಯ ಅಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಐದು ವರ್ಷಗಳ ಹಿಂದೆ ದೇಶದ 28 ವಿಮಾನ ಹಾರಾಟ ತರಬೇತಿ ಶಾಲೆಗಳಿಗೆ ಅನಗತ್ಯ ರಿಯಾಯ್ತಿ ನೀಡಿ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಕ್ಕಾಗಿ `ಡಿಜಿಸಿಎ~ಯ ಹಿರಿಯ ಅಧಿಕಾರಿ ಸೇರಿ ಮೂರು ಜನರನ್ನು ಸರ್ಕಾರ ಅಮಾನತುಗೊಳಿಸಿದೆ.

`ಡಿಜಿಸಿಎ~ (ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಜಂಟಿ ನಿರ್ದೇಶಕರಾದ ಜನರಲ್ ಎ.ಕೆ. ಸರನ್ ಹಾಗೂ ಕಿರಿಯ ಸಿಬ್ಬಂದಿ ಪ್ರವೀಣ್ ಕುಮಾರ್ ಮತ್ತು ಡಿ. ಎಸ್. ಸದಾ ಅವರನ್ನು ಅಮಾನತು ಮಾಡಲಾಗಿದೆ.

ಈ ಪ್ರಕರಣದಲ್ಲಿ, ದೇಶದ ಉದ್ದಗಲಕ್ಕೂ ಇರುವ 28 ವಿಮಾನ ಹಾರಾಟ ತರಬೇತಿ ಶಾಲೆಗಳಿಗೆ ನೀಡಿದ ರಿಯಾಯ್ತಿಯಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) 190 ಕೋಟಿ ರೂಪಾಯಿ ನಷ್ಟವಾಗಿದೆ.

ವಿಮಾನಯಾನ ಸಚಿವಾಲಯದ ನಿಯಮಾವಳಿ ಪ್ರಕಾರ ವಿಮಾನ ಹಾರಾಟ ತರಬೇತಿ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳೆಂದು ನೋಂದಣಿ ಮಾಡಿಕೊಂಡಿರಬೇಕು. ಲಾಭರಹಿತವಾಗಿ ಕೆಲಸ ಮಾಡುತ್ತಿರಬೇಕು. ಆಗ ಮಾತ್ರ ಅವು `ಎಎಐ~ಗೆ ಸಾಂಕೇತಿಕ ಶುಲ್ಕ ಕಟ್ಟಿ ರಿಯಾಯ್ತಿ ಪಡೆಯಬಹುದು. ಆದರೆ, ಇವುಗಳಲ್ಲಿ ನಾಲ್ಕು ಸಂಸ್ಥೆಗಳು ಮಾತ್ರ ಲಾಭರಹಿತವಾಗಿ ಕೆಲಸ ಮಾಡುತ್ತಿವೆ ಎನ್ನಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.