ADVERTISEMENT

ಭಂವರಿದೇವಿ ಪ್ರಕರಣ: ಕಾಲುವೆಯಿಂದ ವಸ್ತುಗಳ ವಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 12:35 IST
Last Updated 7 ಜನವರಿ 2012, 12:35 IST

ಜೋಧಪುರ, ರಾಜಸ್ತಾನ (ಪಿಟಿಐ): ನರ್ಸ ಭಂವರಿದೇವಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೋಳದ ಗ್ರಾಮದ ಸಮೀಪದ ರಾಜೀವ್‌ಗಾಂಧಿ ಎಡದಂತೆ ಕಾಲುವೆಯಿಂದ ಭವಂರಿದೇವಿಗೆ ಸಂಬಂಧಿಸಿದೆ ಎನ್ನಲಾದ ವಾಚ್, ಕೊರಳಿನ ಸರ ಸೇರಿದಂತೆ ಪ್ರಮುಖ ವಸ್ತುಗಳನ್ನು ಸಿಬಿಐ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.

ಭಂವರಿ ದೇವಿ ಅವರನ್ನು ಕೊಲೆ ಮಾಡಿದ ನಂತರ ಈ ವಸ್ತುಗಳನ್ನು ಇಲ್ಲಿನ ಕಾಲುವೆಯಲ್ಲಿ ಎಸೆಯಲಾಗಿತ್ತು ಎಂದು ಹೇಳಲಾಗಿದೆ. 

ಪ್ರಕರಣಕ್ಕೆ ಸಂಬಂಧಪಟ್ಟ ಇನ್ನು ಪ್ರಮುಖ ವಸ್ತುಗಳು ಕಾಲುವೆಯಲ್ಲಿ ದೊರೆಯಬಹುದು ಎನ್ನುವ ಹಿನ್ನೆಲೆಯಲ್ಲಿ  ಕಾಲುವೆಗೆ ನೀರು ಬಿಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ರಾಜಸ್ತಾನ ಸರ್ಕಾರವು ಸಂಬಂಧಪಟ್ಟ ಇಲಾಖೆಗೆ ಆದೇಶಿಸಿದೆ.

ಇಲ್ಲಿ ಪತ್ತೆಯಾದ ಪ್ರಮುಖ ವಸ್ತುಗಳಿಂದ ಭಂವರಿದೇವಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷಿ ಆಧಾರಗಳು ದೊರೆತಂತಾಗಿದೆ ಎನ್ನಲಾಗಿದೆ.

ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ವಸ್ತುಗಳನ್ನು ಇದೇ ಕಾಲುವೆಯಲ್ಲಿ ದೊರೆತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT