ADVERTISEMENT

ಭಾರತೀಯ ಮೀನುಗಾರರ ಮೇಲೆ ಪಾಕ್ ನೌಕಾಪಡೆ ದಾಳಿ, ಒಬ್ಬನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 11:55 IST
Last Updated 27 ಏಪ್ರಿಲ್ 2012, 11:55 IST

ಜಾಮ್ ನಗರ (ಗುಜರಾತ್) (ಪಿಟಿಐ): ಜಕಾಹು ಕರಾವಳಿಯಾಚೆ ಅರಬ್ಬೀ ಸಮುದ್ರದಲ್ಲಿ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿ ಭಾರತೀಯ ಮೀನುಗಾರರ ಮೇಲೆ ಯದ್ವಾತದ್ವ ಗುಂಡು ಹಾರಿಸಿದ ಪರಿಣಾಮವಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

ನಾವೆಯಲ್ಲಿದ್ದ ಆರು ಮಂದಿ ಮೀನುಗಾರರ ಪೈಕಿ ದಯಾ ಭಾಯಿ ಹೆಸರಿನ ಒಬ್ಬ ಭಾರತೀಯ ಮೀನುಗಾರನಿಗೆ ಕಳೆದ ರಾತ್ರಿ ಪಾಕಿಸ್ತಾನ ನೌಕಾಪಡೆ ಭದ್ರತಾ ಸಿಬ್ಬಂದಿ ನಡೆಸಿದ ದಾಳಿಯಿಂದ  ಗುಂಡೇಟಿನ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದರು.

ಭಾರತೀಯ ಮೀನುಗಾರರು ಸಮುದ್ರದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಮೀನುಗಾರಿಕೆ ನಿರತರಾಗಿದ್ದಾಗ ಈ ದಾಳಿ ನಡೆದಿದೆ. ಎಂದು ನೌಕಾಪಡೆ ಪೊಲೀಸ್ ಅಧಿಕಾರಿಗಳು ನುಡಿದರು.

ಪೋರ್ ಬಂದರಿಗೆ ಸೇರಿದ ~ಸಾಗರ ಭುಜ~ ನಾವೆಯ ಮೂಲಕ ಮೀನುಗಾರರು ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದರು. ಘಟನೆಯಲ್ಲಿ ಗಾಯಗೊಂಡ ಮೀನುಗಾರನನ್ನು ಓಖಾದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.