ADVERTISEMENT

ಭಾರತ ವಿರೋಧಿ ಚಟುವಟಿಕೆ ಮಟ್ಟ ಹಾಕಲು ಎಸ್‌ಎಸ್‌ಬಿಯ ಗುಪ್ತಚರ ದಳದ ಸಿದ್ಧತೆ; ನೇಪಾಳ, ಭೂತಾನ್ ಗಡಿ

ಪಿಟಿಐ
Published 13 ಜುಲೈ 2017, 16:53 IST
Last Updated 13 ಜುಲೈ 2017, 16:53 IST
ಭಾರತ ವಿರೋಧಿ ಚಟುವಟಿಕೆ ಮಟ್ಟ ಹಾಕಲು ಎಸ್‌ಎಸ್‌ಬಿಯ ಗುಪ್ತಚರ ದಳದ ಸಿದ್ಧತೆ; ನೇಪಾಳ, ಭೂತಾನ್ ಗಡಿ
ಭಾರತ ವಿರೋಧಿ ಚಟುವಟಿಕೆ ಮಟ್ಟ ಹಾಕಲು ಎಸ್‌ಎಸ್‌ಬಿಯ ಗುಪ್ತಚರ ದಳದ ಸಿದ್ಧತೆ; ನೇಪಾಳ, ಭೂತಾನ್ ಗಡಿ   

ನವದೆಹಲಿ: ನೇಪಾಳ ಮತ್ತು ಭೂತಾನ್‌ ಗಡಿ ಭಾಗಗಳಲ್ಲಿ ರಕ್ಷಣೆಯ ಹೊಣೆ ಹೊತ್ತಿರುವ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ತನ್ನ ಗುಪ್ತಚರ ದಳದ ಮೂಲಕ ದೇಶ ವಿರೋಧಿ ಚಟುವಟಿಕೆ ಕುರಿತು ನಿಗಾ ವಹಿಸಲಿದೆ.

ಎಸ್‌ಎಸ್‌ಬಿ ಗುಪ್ತಚರ ದಳದ 650 ಸಿಬ್ಬಂದಿ ಗಡಿ ಭಾಗಗಳಲ್ಲಿ ನಡೆಯುವ ಚಟುವಟಿಕೆಗಳ ಕಡೆಗೆ ಗಮನ ಹರಿಸಲಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸಮ್ಮತಿಸಿದೆ.

ಭಾರತ–ನೇಪಾಳದ 1,751 ಕಿ.ಮೀ. ಹಾಗೂ ಇಂಡೋ–ಭೂತಾನ್‌ನ 699 ಕಿ.ಮೀ. ಗಡಿ ಪ್ರದೇಶದಲ್ಲಿ ಎಸ್‌ಎಸ್‌ಬಿ ರಕ್ಷಣಾ ಕಾರ್ಯ ನಡೆಸುತ್ತಿದೆ.

ADVERTISEMENT

ಜಾರ್ಖಂಡ್‌ ಹಾಗೂ ಬಿಹಾರದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಗಳೂ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸಲಿವೆ.

ಭೂತಾನ್, ನೇಪಾಳ ಗಡಿಗಳಲ್ಲಿ ಜನರ ಸಂಚಾರಕ್ಕೆ ಯಾವುದೇ ತಡೆಗಳಿಲ್ಲ. ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಭಯ ರಾಷ್ಟ್ರಗಳ ಜನರು ಉತ್ತಮ ಸಂಬಂಧ ಹೊಂದಿದ್ದು, ಅಹಿತಕರ ಘಟನೆ ಸಂಭವಿಸದಂತೆ ರಕ್ಷಣೆ ಒದಗಿಸುವ ಜವಾಬ್ದಾರಿ ಹೊತ್ತಿದೆ.

1962ರಲ್ಲಿ ಚೀನಾದ ದಾಳಿ ನಂತರದಲ್ಲಿ 80 ಸಾವಿರ ಸಿಬ್ಬಂದಿ ಹೊಂದಿರುವ ಬಲಿಷ್ಠ ಪಡೆ ಎಸ್‌ಎಸ್‌ಬಿ ಅನ್ನು 1963ರಲ್ಲಿ ಸ್ಥಾಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.