ADVERTISEMENT

ಭ್ರಷ್ಟಾಚಾರ ಪ್ರಮುಖ ವೈರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಅಮೇಥಿ (ಪಿಟಿಐ): ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಪ್ರಿಯಾಂಕಾ ಗಾಂಧಿ, `ಭ್ರಷ್ಟಾಚಾರ, ಅರಾಜತೆ ಮತ್ತು ರಾಜಕೀಯ ಅವಕಾಶವಾದಗಳು ರಾಜ್ಯದ ಜನರ ಪ್ರಮುಖ ವೈರಿಗಳಾಗಿವೆ~ ಎಂದಿದ್ದಾರೆ.

ಐದು ದಿನಗಳ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಪ್ರಿಯಾಂಕಾ, ಅಮೇಥಿ, ರಾಯ್‌ಬರೇಲಿಯ ತಲಾ ಐದು ಕ್ಷೇತ್ರಗಳಿಗೆ ಸೀಮಿತವಾಗಿ ಪ್ರಚಾರ ನಡೆಸುವುದಾಗಿ ಹೇಳಿದರು.

ಮುಲಾಯಂ ಸಿಂಗ್ ಯದವ್ ಮತ್ತು ಮಾಯಾವತಿ ಇಬ್ಬರಲ್ಲಿ ಕಾಂಗ್ರೆಸ್‌ಗೆ ಪ್ರಬಲ ವೈರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಭ್ರಷ್ಟಾಚಾರ, ಅರಾಜಕತೆ ಮತ್ತು ಅವಕಾಶವಾದ ರಾಜಕಾರಣವೇ ರಾಜ್ಯದ ಜನರ ಪ್ರಮುಖ ವೈರಿಗಳು. ಆದರೆ ರಾಹುಲ್ ಇದಕ್ಕೆ ಹೊರತಾಗಿದ್ದು, ಇವುಗಳನ್ನು ಬದಲಾಯಿಸಲು ಕೆಲಸ ಮಾಡುತ್ತಿದ್ದಾರೆ~ ಎಂದು ನುಡಿದರು.

`ಈ ಚುನಾವಣೆಯಲ್ಲಿ ಈ ರೀತಿಯ ರಾಜಕಾರಣ ಕೆಲಸ ಮಾಡುವುದಿಲ್ಲ. ಜನರು ಬದಲಾವಣೆ ಬಯಸಿದ್ದು, ಮತದಾರರಿಂದ ಇದು ಸಾಧ್ಯವಾಗಲಿದೆ~ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಪ್ರಭಾವ ಚುನಾವಣೆ ಮೇಲೆ ಬೀರುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಇದನ್ನು ಜನರಿಗೇ ಕೇಳಿ, ಅವರೇ ಉತ್ತರಿಸುತ್ತಾರೆ~ ಎಂದರು.

ಇಂದು ಮರು ಮತದಾನ
ಇಂಫಾಲ(ಐಎಎನ್‌ಎಸ್): ಮಣಿಪುರದ ಐದು ಗುಡ್ಡಗಾಡು ಜಿಲ್ಲೆಗಳಲ್ಲಿ ಶನಿವಾರ ಘೋಷಿಸಲಾಗಿರುವ  ಮರುಮತದಾನವನ್ನು ಶಾಂತಿಯುತವಾಗಿ ನಡೆಸಲು ಹೆಚ್ಚುವರಿ ರಕ್ಷಣಾ ಸಿಬ್ಬಂದಿಯನ್ನು ಚುನಾವಣಾ ಆಯೋಗ ನಿಯೋಜಿಸಿದೆ.

ಉಖ್ರುಲ್, ತೆಮೆಂಗ್ಲಾಂಗ್, ಸೇನಾಪತಿ, ಚಂದೇಲ್ ಹಾಗೂ ಚುರಾಚಾಂದ್‌ಪುರಗಳ ಒಟ್ಟೂ 34 ಚುನಾವಣಾ ಮತಗಟ್ಟೆಗಳಲ್ಲಿ  ಮರುಮತದಾನ   ನಡೆಯಲಿದೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.