ಪಾಲಕ್ಕಾಡ್(ಕೇರಳ)(ಪಿಟಿಐ): ಜಿಲ್ಲೆಯ ಅಟ್ಟಪಾಡಿ ಬುಡಕಟ್ಟು ಪ್ರದೇಶದ ಹಳ್ಳಿಗಳಲ್ಲಿ `ಮದ್ಯಪಾನ ವಿರೋಧಿ ಆಂದೋಲನ' ಆರಂಭಿಸುವಂತೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜೈರಾಮ್ ರಮೇಶ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅನಾರೋಗ್ಯ, ಅಪೌಷ್ಟಿಕತೆ ಸೇರಿದಂತೆ ಕಾರಣಗಳಿಂದ ಆರು ತಿಂಗಳಲ್ಲಿ 28 ಮಕ್ಕಳು ಸಾವನ್ನಪ್ಪಿರುವ ಅಟ್ಟಪಾಡಿ ಬುಡಕಟ್ಟು ಪ್ರದೇಶ ಪಾಲೂರ್‌ಗೆ ಗುರುವಾರ ಭೇಟಿ ನೀಡಿದ ಅವರು, ಅಲ್ಲಿನ ಜನರಿಗೆ `ಮದ್ಯಪಾನ ಮಾಡಬೇಡಿ' ಎಂದು ತಿಳಿಸಿದರು. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರೊಂದಿಗೆ ಮಕ್ಕಳು ಸಾವನ್ನಪ್ಪಿದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.