ADVERTISEMENT

ಮಧ್ಯಪ್ರದೇಶದಲ್ಲಿ ಈರುಳ್ಳಿ ಬೆಲೆ ಕನಿಷ್ಠ ₹2ಕ್ಕೆ ಕುಸಿತ: ರೈತರು ಕಂಗಾಲು

ಏಜೆನ್ಸೀಸ್
Published 24 ಮೇ 2018, 11:03 IST
Last Updated 24 ಮೇ 2018, 11:03 IST
ಭೋಪಾಲ್‌ನ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿ ಕುಳಿರುವ ಈರುಳ್ಳಿ ಬೆಳೆಗಾರರು ಚಿತ್ರ: ಎಎನ್‌ಐ ಟ್ವೀಟ್‌
ಭೋಪಾಲ್‌ನ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿ ಕುಳಿರುವ ಈರುಳ್ಳಿ ಬೆಳೆಗಾರರು ಚಿತ್ರ: ಎಎನ್‌ಐ ಟ್ವೀಟ್‌   

ಭೋಪಾಲ್‌: ಮಧ್ಯಪ್ರದೇಶದಲ್ಲಿ ಈರುಳ್ಳಿ ಬೆಲೆ ಕನಿಷ್ಠಮಟ್ಟಕ್ಕೆ ಕುಸಿದಿದ್ದು, ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.

ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕನಿಷ್ಠ ₹2ರಿಂದ ₹3ಕ್ಕೆ ಕುಸಿದಿದೆ. ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದೇವೆ ಎಂದು ಭೋಪಾಲ್‌ನ ಸಾಬ್ಜಿ ಮಂಡಿಯೊಂದರಲ್ಲಿ ಈರುಳ್ಳು ಮಾರಾಟಕ್ಕೆ ತಂದಿದ್ದ ರೈತರು ಅಲವತ್ತುಕೊಂಡಿದ್ದಾರೆ.

ಈರುಳ್ಳಿಯ ಬಂಪರ್‌ ಬೆಳೆ ಬಂದಿದ್ದು, ಅಧಿಕ ಉತ್ಪಾದನೆಯೇ ದರ ಕುಸಿಯಲು ಕಾರಣ ಎನ್ನಲಾಗಿದೆ.

ADVERTISEMENT

ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಭವಂತರ್‌ ಭುಗ್ತನ್‌ ಯೋಜನೆ’ ಅಡಿ ನಮಗೆ ಎಷ್ಟು ಪ್ರಯೋಜನವಾಗುತ್ತದೆ ಎಂಬ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ ಎಂದು ರೈತರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.