ADVERTISEMENT

ಮನೆ ತೊರೆದ ನಂತರ ಮಾಹಿತಿ ಇರಲಿಲ್ಲ

‘ಜಾಗತಿಕ ಭಯೋತ್ಪಾದಕ’ ಪಟ್ಟ ಹೊತ್ತ ಶಫಿ ಅರ್ಮಾರ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:57 IST
Last Updated 16 ಜೂನ್ 2017, 19:57 IST
ಮನೆ ತೊರೆದ ನಂತರ ಮಾಹಿತಿ ಇರಲಿಲ್ಲ
ಮನೆ ತೊರೆದ ನಂತರ ಮಾಹಿತಿ ಇರಲಿಲ್ಲ   

ಭಟ್ಕಳ: ಅಮೆರಿಕವು ‘ಜಾಗತಿಕ ಭಯೋತ್ಪಾದಕರ ಪಟ್ಟಿ’ಗೆ ಸೇರಿಸಿರುವ ಐ.ಎಸ್‌ ಉಗ್ರ, ಭಟ್ಕಳದ ಮೊಹಮ್ಮದ್‌ ಶಫಿ ಅರ್ಮಾರ್‌, 10ನೇ ತರಗತಿವರೆಗೆ ಇಲ್ಲಿನ ಮದರಸಾದಲ್ಲಿ ಓದಿದ್ದ.

‘2006ರಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ದುಬೈಗೆ ಹೋದವನು, ಆ ನಂತರ ಅಲ್ಲಿ ಏನು ಮಾಡುತ್ತಿದ್ದ? ಮುಂದೆ ಅಲ್ಲಿಂದ ಎಲ್ಲಿಗೆ ಹೋದ?’ ಎಂಬ ಯಾವ ಮಾಹಿತಿಯೂ ಆತನ ಕುಂಟುಂಬದ ಸದಸ್ಯರಿಗೆ ಇಲ್ಲ.

ಭಟ್ಕಳದಲ್ಲಿ ಮೌಲ್ವಿ ಕೆಲಸ ಮಾಡಿಕೊಂಡಿದ್ದ ಈತನ ಹಿರಿಯ ಸಹೋದರ ಸುಲ್ತಾನ್ ಅರ್ಮಾರ್‌ ಸಹ, ಶಫಿ ದೇಶ ತೊರೆದ ಎರಡು ವರ್ಷಗಳ ನಂತರ ದುಬೈಗೆ ತೆರಳಿದ್ದಾನೆ ಎನ್ನಲಾಗಿದೆ. ಸುಲ್ತಾನ್‌ ಎಲ್ಲಿದ್ದಾನೆ ಎಂಬ ಮಾಹಿತಿಯೂ ಅವರ ಮನೆಯವರಿಗೆ ಇಲ್ಲ.

ಸಿರಿಯಾ ಯುದ್ಧದ ಸಂದರ್ಭದಲ್ಲಿ ಶಫಿ ಮತ್ತು ಸುಲ್ತಾನ್ ಅರ್ಮಾರ್ ಡ್ರೋಣ್ ದಾಳಿಯಲ್ಲಿ ಮೃತಪಟ್ಟರು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದೀಗ ಅಂತರರಾಷ್ಟ್ರೀಯ ಉಗ್ರರ ಪಟ್ಟಿಯಲ್ಲಿ ಶಫಿ ಅರ್ಮಾರ್ ಹೆಸರು ಸೇರಿದೆ. 2013ರಲ್ಲಿ ಬಂಧಿತನಾದ ಐಎಂಸಂಘಟನೆಯ ಯಾಸೀನ್ ಭಟ್ಕಳ, ತನಿಖೆ ವೇಳೆ ಶಫಿ ಬಗ್ಗೆ ಮಾಹಿತಿ ನೀಡಿದ್ದ. ಐ.ಎಂ ಉಗ್ರ ಸಂಘಟನೆಯ ಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ ಸಹೋದರರೊಂದಿಗೆ ಶಫಿ  ಸಕ್ರಿಯವಾಗಿದ್ದ. ಅವರೊಂದಿಗೆ ಮನಸ್ತಾಪ ಉಂಟಾದ ಮೇಲೆ ಐ.ಎಸ್‌ ಸೇರಿದ್ದ ಎಂದು ತಿಳಿದು ಬಂದಿದೆ.

ಶಫಿ ತಂದೆ ಮೃತಪಟ್ಟಿದ್ದು, ತಾಯಿ ಮೂರನೇ ಮಗನ ಜೊತೆಗೆ ದುಬೈನಲ್ಲಿದ್ದಾರೆ. ಇನ್ನೊಬ್ಬ ಸಹೋದರ ಸಫಾನ್, ಭಟ್ಕಳದ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರೂ ಬೆಂಗಳೂರಿಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.