ADVERTISEMENT

ಮಲಾಲ ದಿನಕ್ಕೆ ಒಡಿಶಾದ ಬುಡಕಟ್ಟು ಯುವಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ಭುವನೇಶ್ವರ (ಐಎಎನ್‌ಎಸ್): ಒಡಿಶಾದ 17 ವರ್ಷದ ಬುಡಕಟ್ಟು ವಿದ್ಯಾರ್ಥಿ ಅಮೆರಿಕದಲ್ಲಿ ಜು. 12 ರಂದು ನಡೆಯಲಿರುವ `ಮಲಾಲ ದಿನ' ಆಚರಣೆಯಲ್ಲಿ ಭಾಗವಹಿಸಲಿರುವುದಾಗಿ ವಿಶ್ವ ಸಂಸ್ಥೆಯ ಮುಖ್ಯಕಚೇರಿ ತಿಳಿಸಿದೆ.

ಕಳಿಂಗಾ ಸಾಮಾಜಿಕ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಬುಡಕಟ್ಟು ವಿದ್ಯಾರ್ಥಿ ಲಕ್ಷ್ಮಣ್ ಹೆಮ್‌ಬ್ರಮ್ ಭಾರತದ ಪರವಾಗಿ `ಮಲಾಲ ದಿನ' ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಯೂರ್‌ಭಂಜ್ ಜಿಲ್ಲೆಯ ಬಡ ಸಂತಾಲ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಲಕ್ಷ್ಮಣ್ ಯುವ ನಾಯಕನ ಗುಣ ಹೊಂದಿರುವ ಬುದ್ಧಿವಂತ ವಿದ್ಯಾರ್ಥಿ.

ಪಾಕಿಸ್ತಾನದ ಹೋರಾಟಗಾರ್ತಿ ಮಲಾಲಳ 16 ನೇ ಜನ್ಮದಿನಾಚರಣೆಯನ್ನು ಮಲಾಲ ದಿನವನ್ನಾಗಿ ಜು. 11, 12 ರಂದು ಆಚರಿಸಲು ವಿಶ್ವ ಸಂಸ್ಥೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.