ADVERTISEMENT

ಮಹಾತ್ಮ ಗಾಂಧಿ ಹತ್ಯೆಯ ಮರುತನಿಖೆಗೆ ಅರ್ಜಿ: ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರೀಂಕೋರ್ಟ್‌

ಏಜೆನ್ಸೀಸ್
Published 6 ಅಕ್ಟೋಬರ್ 2017, 8:33 IST
Last Updated 6 ಅಕ್ಟೋಬರ್ 2017, 8:33 IST
ಮಹಾತ್ಮ ಗಾಂಧಿ ಹತ್ಯೆಯ ಮರುತನಿಖೆಗೆ ಅರ್ಜಿ: ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರೀಂಕೋರ್ಟ್‌
ಮಹಾತ್ಮ ಗಾಂಧಿ ಹತ್ಯೆಯ ಮರುತನಿಖೆಗೆ ಅರ್ಜಿ: ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರೀಂಕೋರ್ಟ್‌   

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಸಂಬಂಧ ನ್ಯಾಯಾಲಯಕ್ಕೆ ನೆರವಾಗಲು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ನೇಮಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಅವರಿದ್ದ ನ್ಯಾಯಪೀಠವು ಹಿರಿಯ ವಕೀಲ ಅಮರೇಂದರ್‌ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ.

ಮಹಾತ್ಮ ಗಾಂಧಿ ಹತ್ಯೆ ಕುರಿತು ಪೂರ್ಣ ಸತ್ಯ ಹೊರಬರಬೇಕಿದ್ದು, ಈ ಬಗ್ಗೆ ಮರುತನಿಖೆಗೆ ಆದೇಶಿಸಬೇಕು ಎಂದು ಕೋರಿ ಮುಂಬೈ ಮೂಲದ ಸಂಶೋಧಕ ಡಾ. ಪಂಕಜ್‌ ಫಡ್ನಿಸ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಕ್ಟೋಬರ್‌ 30ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ADVERTISEMENT

1948ರ ಜನವರಿ 30ರಂದು ನಾಥೂರಾಮ್‌ ಗೋಡ್ಸೆ ಗುಂಡಿಗೆ ಮಹಾತ್ಮ ಗಾಂಧಿ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.