ADVERTISEMENT

ಮಹಾಬೋಧಿ ದೇವಾಲಯ ಸಮುಚ್ಚಯದಲ್ಲಿ 13 ಬಾಂಬ್: ಶಿಂಧೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 11:18 IST
Last Updated 8 ಜುಲೈ 2013, 11:18 IST

ತೇಲ್ ಗಾಂವ್ (ಮಹಾರಾಷ್ಟ್ರ) (ಪಿಟಿಐ): ಬುದ್ದಗಯಾದ ಮಹಾಬೋಧಿ ದೇವಾಲಯ ಸಮುಚ್ಚಯದಲ್ಲಿ ಸುಮಾರು 13 ಬಾಂಬ್ ಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸೋಮವಾರ ಹೇಳಿದರು. ಭಾನುವಾರ ಇಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಭಿಕ್ಷುಗಳು ಗಾಯಗೊಂಡಿದ್ದರು.

'ದೇವಾಲಯ ಸಮುಚ್ಚಯದಲ್ಲಿ 10 ಸ್ಫೋಟಗಳು ಸಂಭವಿಸಿದ ಬಗ್ಗೆ ನನಗೆ ಈದಿನ ಮಾಹಿತಿ ಬಂದಿದೆ. ಒಟ್ಟು 13 ಬಾಂಬ್ ಗಳನ್ನು ಅಲ್ಲಿ ಅಡಗಿಸಿ ಇಡಲಾಗಿತ್ತು. ಅವುಗಳನ್ನು ಎಲ್ಲೆಲ್ಲಿ ಇಡಲಾಗಿತ್ತು ಎಂಬ ವಿವರಗಳ ಬಗ್ಗೆ ನಾನು ಈಗ ಹೇಳಲಾರೆ. 50ರ ಹರೆಯದ ದೋರ್ಜಿ ಮತ್ತು ಬಾಲ ಸಂಗ (30) ಈ ಇಬ್ಬರು ಸ್ಫೋಟಗಳಲ್ಲಿ ಗಾಯಗೊಂಡಿದ್ದಾರೆ' ಎಂದು ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಪುಣೆಯಿಂದ 100 ಕಿ.ಮೀ. ದೂರದ ತೇಲ್ ಗಾಂವ್ ನಂಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಆಸ್ಪತ್ತೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಂದರ್ಭದಲ್ಲಿ ಗೃಹ ಸಚಿವರು ಪತ್ರಕರ್ತರ ಜೊತೆಗೆ ಮಾತನಾಡಿದರು.

ADVERTISEMENT

ಬುದ್ಧ ಗಯಾ ಪಟ್ಟಣದಲ್ಲಿ ಭಾನುವಾರ 10  ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ವಿಶ್ವವಿಖ್ಯಾತ ಮಹಾಬೋಧಿ ದೇವಾಲಯ ಆವರಣದಲ್ಲೇ ನಾಲ್ಕು ಸ್ಫೋಟಗಳು ಸಂಭವಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.