ADVERTISEMENT

ಮಹಾಯುದ್ಧದ ಹಿರಿಯ ಯೋಧ ನಿಧನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಶಿಮ್ಲಾ (ಐಎಎನ್‌ಎಸ್): ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಸೆಣೆಸಿದ್ದ ಮಾಜಿ ಯೋಧ ಪಿಯಾರಾ ಸಿಂಗ್ ತಮ್ಮ 106ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ.ಕಳೆದ ಕೆಲದಿನಗಳಿಂದ ಅಸ್ವಸ್ಥರಾಗಿದ್ದ ಪಿಯಾರಾ ಸಿಂಗ್, ಉನಾ ಜಿಲ್ಲೆಯ ತಾಕೊಳಿ ಗ್ರಾಮದಲ್ಲಿ ಗುರುವಾರ ನಿಧನ ಹೊಂದಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1906ರಲ್ಲಿ ಜನಿಸಿದ್ದ ಪಿಯಾರಾ, 1930ರಲ್ಲಿ ಬ್ರಿಟಿಷ್ ಸೇನೆಗೆ ಸೇರ್ಪಡೆಯಾಗಿದ್ದರು. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಸೂಡಾನ್‌ನಲ್ಲಿ ಸೆಣೆಸುವಾಗ 7 ಗುಂಡುಗಳು ಇವರ ಮೈಹೊಕ್ಕಿದ್ದವು.
ಪಿಯಾರಾ ಸಿಂಗ್ ಪತ್ನಿ 2009ರಲ್ಲಿ ತನ್ನ 101ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಐದು ಪೀಳಿಗೆ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.