
ಪ್ರಜಾವಾಣಿ ವಾರ್ತೆ
ನವದೆಹಲಿ: ಮಾಜಿ ಲೋಕಸಭಾಧ್ಯಕ್ಷ ಮತ್ತು ಎನ್‌ಸಿಪಿ ಸಂಸ್ಥಾಪಕ ನಾಯಕ ಪಿ.ಎ. ಸಂಗ್ಮಾ (68) ಅವರು ಶುಕ್ರವಾರ ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು.
1988ರಿಂದ 1990ರ ವರೆಗೆ ಅವರು ಮೇಘಾಲಯದ ಮುಖ್ಯಮಂತ್ರಿ ಆಗಿದ್ದರು. 1996 ರಿಂದ 1998ರವರೆಗೆ ಅವರು ಲೋಕಸಭಾ ಸ್ಪೀಕರ್ ಆಗಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಸಿಡಿದು ಬಂದ ಸಂಗ್ಮಾ, ಪವಾರ್ ಮತ್ತು ತಾರಿಕ್ ಅನ್ವರ್ ಜತೆ ಸೇರಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಯನ್ನು ಹುಟ್ಟು ಹಾಕಿದ್ದರು.
2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಸಂಗ್ಮಾ ಅವರನ್ನು ಪಕ್ಷ ಬೆಂಬಲಿಸದ ಕಾರಣ ಬೇಸರಗೊಂಡು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಸಂಗ್ಮಾ ಅವರ ಪುತ್ರಿ, ಸಚಿವೆ ಅಗಾಥಾ ಸಂಗ್ಮಾ ಮತ್ತು ಪುತ್ರ ಸಿ. ಸಂಗ್ಮಾ ಅವರನ್ನು ಅಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.