ADVERTISEMENT

‘ಮಾಲ್‌ಗೆ ಹೋಗುವ ಸೊಸೆ ಬೇಡ’

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ರಾಬ್ಡಿ ದೇವಿ
ರಾಬ್ಡಿ ದೇವಿ   

ಪಟ್ನಾ: ಬೃಹತ್ ಶಾಪಿಂಗ್ ಮಾಲ್ ನಿರ್ಮಾಣ ವಿಷಯದಲ್ಲಿ ಬಿಹಾರ ಸರ್ಕಾರದ ಆರೋಗ್ಯ ಸಚಿವ ತೇಜ್ ಪ್ರತಾಪ್ ಅವರು ವಿವಾದದಲ್ಲಿದ್ದಾರೆ.

ಆದರೆ ಅವರ ತಾಯಿ ರಾಬ್ಡಿ ದೇವಿ ಅವರು ಮಾತ್ರ ತಮ್ಮ ಮಗನಿಗೆ ಹೆಂಡತಿಯಾಗಿ ಬರುವವಳು ಶಾಪಿಂಗ್ ಮಾಲ್‌ಗೆ ಭೇಟಿ ನೀಡದ, ಸಿನಿಮಾ ನೋಡುವುದನ್ನು ಇಷ್ಟಪಡದವಳು ಆಗಿರಬೇಕು ಎಂದು ಷರತ್ತು ಇಟ್ಟಿದ್ದಾರೆ.

‘ಸೊಸೆಯಾಗಿ ಬರುವವಳು ನನ್ನಂತೆ ಇರಬೇಕು. ಸುಸಂಸ್ಕೃತಳಾಗಿರಬೇಕು. ಮನೆ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಹಿರಿಯರನ್ನು ಗೌರವಿಸಬೇಕು. ಅಗತ್ಯಬಿದ್ದರೆ  ಮನೆ ಹೊರಗಿನ ಜವಾಬ್ದಾರಿಗಳನ್ನು ನಿಭಾಯಿಸಲೂ ಶಕ್ತಳಾಗಿರಬೇಕು’ ಎಂದು ಅವರು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.