ADVERTISEMENT

ಮಾಸ್ಕ್‌ ಧರಿಸಲು ಒಬಾಮಗೆ ಮನವಿ

ಏಜೆನ್ಸೀಸ್
Published 1 ಡಿಸೆಂಬರ್ 2017, 11:38 IST
Last Updated 1 ಡಿಸೆಂಬರ್ 2017, 11:38 IST
ಮಾಸ್ಕ್‌ ಧರಿಸಲು ಒಬಾಮಗೆ ಮನವಿ
ಮಾಸ್ಕ್‌ ಧರಿಸಲು ಒಬಾಮಗೆ ಮನವಿ   

ನವದೆಹಲಿ: ದೆಹಲಿಯಲ್ಲಿನ ವಾಯುಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಮಾಸ್ಕ್ ಧರಿಸುವಂತೆ ಡೆಟಾವಿಜ್ಞಾನಿ ಅಮೃತ್‌ಶರ್ಮಾ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಬಾಮ ಶುಕ್ರವಾರ ಬರುತ್ತಿದ್ದಾರೆ.

‘ನೀವು ಜನರಿಂದ ಅತಿಹೆಚ್ಚು ಫೋಟೊಗಳನ್ನು ಕ್ಲಿಕ್ಕಿಸಿಕೊಂಡ ವ್ಯಕ್ತಿ. ಆದರೆ, ನಿಮ್ಮ ಯಾವೊಂದು ಚಿತ್ರವೂ ಸಾವಿರಾರು ಜನರ ಜೀವನ ಉಳಿಸುವಷ್ಟು ಪ್ರಭಾವಶಾಲಿಯಾಗಿಲ್ಲ. ದೆಹಲಿಯ ಕಾರ್ಯಕ್ರಮಗಳಲ್ಲಿ ನೀವು ಮಾಸ್ಕ್‌ ಧರಿಸಿ ಭಾಗವಹಿಸಿದರೆ, ಅದು ಗಮನಾರ್ಹ ಬದಲಾವಣೆ ತರಬಲ್ಲದು’ ಎಂದು ಶರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಒಬಾಮ ಮಾಸ್ಕ್‌ನಲ್ಲಿ ಕಾಣಿಸಿಕೊಂಡರೆ ಸ್ಥಳೀಯ ಆಡಳಿತ ವರ್ಗವು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ಮಾಪನದ ಪ್ರಕಾರ 7 ದಿನಗಳಿಂದ ನಗರದಲ್ಲಿನ ಗಾಳಿಯ ಗುಣಮಟ್ಟ ಸೂಚ್ಯಂಕವು 360 ತಲುಪಿದೆ. ಮಾಪನದಲ್ಲಿ ಇದನ್ನು ಅತಿಕಳಪೆ ಎಂದು ಪರಿಗಣಿಸಲಾಗುತ್ತದೆ. ಸೂಚ್ಯಂಕ 100ರೊಳಗಿದ್ದರೆ ಮಾತ್ರ ಗುಣಮಟ್ಟ ಸಮಾಧಾನಕರ ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.