ADVERTISEMENT

ಮಾ. 5ರಂದು ಐಪಿಎಲ್‌ ಸ್ಥಳ ನಿಗದಿ: ಶುಕ್ಲಾ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 13:17 IST
Last Updated 2 ಮಾರ್ಚ್ 2014, 13:17 IST

ನಾಗಪುರ (ಪಿಟಿಐ): 2014ನೇ ಸಾಲಿನ ಐಪಿಎಲ್‌ ಪಂದ್ಯಗಳು ನಡೆಯುವ ಸ್ಥಳದ ಬಗ್ಗೆ ಮಾರ್ಚ್‌ 5ರಂದು ಇಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಕೈಗೊಳ್ಳಲಿದೆ ಎಂದು ಮಂಡಳಿಯ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಭಾನುವಾರ ತಿಳಿಸಿದ್ದಾರೆ.

ಏಪ್ರಿಲ್‌–ಮೇ ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಭಾರತದಲ್ಲಿ ಐಪಿಎಲ್‌ ನಡೆಯುವ ಸಾಧ್ಯತೆಗಳಿಲ್ಲ ಎಂದ ಶುಕ್ಲಾ ‘ನಾವು ಸತತವಾಗಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಸಂಬಂಧ ಮಾರ್ಚ್‌ 5ರಂದು ನಿರ್ಧಾರ ಕೈಗೊಳ್ಳಲಾಗುವುದು. ಸ್ಥಳ ನಿರ್ಧರಿಸುವ ಅಧಿಕಾರ ಬಿಸಿಸಿಐ ಅಧ್ಯಕ್ಷರಿಗಿದೆ’ ಎಂದು ಹೇಳಿದರು.

ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಯುಎಇ ರಾಷ್ಟ್ರಗಳಲ್ಲಿ ಪಂದ್ಯಗಳನ್ನು ನಡೆಸುವ ಆಯ್ಕೆಗಳು ಬಿಸಿಸಿಐ ಎದುರಿಗಿವೆ. ನಾಲ್ಕನೇ ಆಯ್ಕೆಯಾಗಿ ಶ್ರೀಲಂಕಾ ಇತ್ತು. ಆದರೆ ಐಪಿಎಲ್‌ ಅವಧಿಯಲ್ಲಿ ದ್ವೀಪರಾಷ್ಟ್ರದಲ್ಲಿ  ಮಳೆ ಬೀಳುವ ಕಾರಣ ಪಂದ್ಯ ಆಯೋಜನೆ ಸಾಧ್ಯತೆಗಳನ್ನು  ಅದು ತಳ್ಳಿಹಾಕಿದೆ’ ಎಂದೂ ಅವರು ನುಡಿದರು.

ADVERTISEMENT

ಅಲ್ಲದೇ, ‘ಅರ್ಧ ಪಂದ್ಯಗಳನ್ನು ವಿದೇಶದಲ್ಲಿ ನಡೆಸಬೇಕು ಹಾಗೂ ಸಾರ್ವತ್ರಿಕ ಚುನಾವಣೆ ಮುಗಿದ ಬಳಿಕ ಉಳಿದ ಪಂದ್ಯಗಳನ್ನು ಭಾರತದಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಶುಕ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.