ADVERTISEMENT

ಮೀಟೂ ಆರೋಪ: ಅಕ್ಬರ್‌ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:28 IST
Last Updated 4 ಮೇ 2019, 20:28 IST
ಎಂ.ಜೆ. ಅಕ್ಬರ್‌
ಎಂ.ಜೆ. ಅಕ್ಬರ್‌   

ನವದೆಹಲಿ:ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ,ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೆಹಲಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್‌ ವಿಶಾಲ್‌ ಮುಂದೆ ಹಾಜರಾದ ಅಕ್ಬರ್‌, ನನ್ನ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ಪ್ರಿಯಾ ರಮಣಿ ಈ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ರಮಣಿ ಪರ ವಕೀಲರಾದ ರೆಬೆಕಾ ಜಾನ್‌,ರಮಣಿ ಅವರು ಏಷಿಯನ್‌ ಏಜ್‌ ಪತ್ರಿಕೆಗೆ ಸೇರಿದ ದಿನದಿಂದ ನಡೆದ ಘಟನೆಗಳ ಕುರಿತು ಅಕ್ಬರ್‌ ಅವರ ಪಾಟಿ ಸವಾಲು ನಡೆಸಿದರು.ವಕೀಲರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಅಕ್ಬರ್‌, ‘ನನಗೆ ನೆನಪಿಲ್ಲ’ ಎಂದೇ ಉತ್ತರಿಸಿದ್ದಾರೆ.ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿ ಪಡಿಸಲಾಗಿದೆ.

ADVERTISEMENT

20 ವರ್ಷಗಳ ಹಿಂದೆ ಎಂ.ಜೆ.ಅಕ್ಬರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಿಯಾ ರಮಣಿ ಆರೋಪಿಸಿದ್ದರು. ತಮ್ಮ ಮೇಲಿನ ಆರೋಪವನ್ನು ಅಕ್ಬರ್‌ ತಿರಸ್ಕರಿಸಿದ್ದರು. ಅಲ್ಲದೇ ರಮಣಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.