ADVERTISEMENT

ಮುಲ್ಲಪೆರಿಯಾರ್ ವಿವಾದ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ತಿರುವನಂತಪುರ (ಪಿಟಿಐ):  ತಮಿಳುನಾಡಿನೊಂದಿಗೆ ಸಂಘರ್ಷಕ್ಕೆ ಕಾರಣವಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರ ಸಮಿತಿ ನೀಡಿದ ವರದಿಯನ್ನು `ಏಕಪಕ್ಷೀಯ~ ಎಂದು ಕೇರಳ ಸರ್ಕಾರ ಟೀಕಿಸಿದೆ. ಹೊಸ ಅಣೆಕಟ್ಟು ನಿರ್ಮಿಸುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ರೂರ‌್ಕಿ ಮತ್ತು ದೆಹಲಿಯ ಐಐಟಿಗಳು ನೀಡಿದ ವರದಿಯನ್ನು ಗಣನೆಗೆ ತೆಗೆದುಕೊಳ್ಳದ ಸಿಇಸಿ, ತಮಿಳುನಾಡಿನ ಅಣ್ಣಾಮಲೈ ವಿವಿಯ ವರದಿಯ ಆಧಾರದ ಮೇಲೆ ಅಣೆಕಟ್ಟು ಸುರಕ್ಷಿತಾವಾಗಿದೆ ಎಂಬ ನಿರ್ಣಯಕ್ಕೆ ಬಂದಿದೆ ಎಂದು ಜಲಸಂಪನ್ಮೂಲ ಸಚಿವ ಪಿ.ಆರ್. ಜೋಸೆಫ್  ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT