ADVERTISEMENT

ಮೂತ್ರಪಿಂಡ ಕಸಿ ಜೇಟ್ಲಿ ಏಮ್ಸ್‌ಗೆ ದಾಖಲು

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST

ನವದೆಹಲಿ : ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ದಾಖಲಿಸಲಾಗಿದೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಶನಿವಾರ ಮೂತ್ರಪಿಂಡ ಕಸಿ ನಡೆಯಲಿದೆ.

ಸೋಮವಾರದಿಂದ ಜೇಟ್ಲಿ ಅವರು ಕಚೇರಿಗೆ ಹೋಗಿಲ್ಲ. ರಾಜ್ಯಸಭೆಗೆ ಮರುಆಯ್ಕೆ ಆಗಿರುವ ಅವರು ಪ್ರಮಾಣವಚನವನ್ನೂ ಸ್ವೀಕರಿಸಿಲ್ಲ. ಸೋಮವಾರದಿಂದ ಮನೆಯಲ್ಲಿಯೇ ಇದ್ದ ಅವರನ್ನು ಶುಕ್ರವಾರ ಸಂಜೆ ಏಮ್ಸ್‌ಗೆ ದಾಖಲಿಸಲಾಯಿತು.

ಮೂತ್ರಪಿಂಡ ದಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಧುಮೇಹ ಸಮಸ್ಯೆ ಹೊಂದಿರುವ ಜೇಟ್ಲಿ ಅವರ ತೂಕದಲ್ಲಿ ಹೆಚ್ಚಳವಾಗಿತ್ತು. ಅದನ್ನು ನಿಯಂತ್ರಿಸುವುದಕ್ಕಾಗಿ 2014ರಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಈ ಶಸ್ತ್ರಕ್ರಿಯೆ ನಡೆದಿತ್ತು. ಬಳಿಕ ಉಂಟಾದ ಸಮಸ್ಯೆಗಳಿಂದಾಗಿ ಅವರನ್ನು ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಅವರಿಗೆ ಹೃದಯ ಶಸ್ತ್ರಕ್ರಿಯೆಯೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.