ADVERTISEMENT

ಮೂರ್ಖರ ದಿನವನ್ನು ಜುಮ್ಲಾ ದಿವಸ್, ಪಪ್ಪು ದಿವಸ್ ಆಗಿ ಆಚರಿಸಿಕೊಂಡ ಕಾಂಗ್ರೆಸ್, ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 16:34 IST
Last Updated 1 ಏಪ್ರಿಲ್ 2018, 16:34 IST
ರಾಹುಲ್ ಗಾಂಧಿ - ನರೇಂದ್ರ ಮೋದಿ
ರಾಹುಲ್ ಗಾಂಧಿ - ನರೇಂದ್ರ ಮೋದಿ   

ನವದೆಹಲಿ: ಏಪ್ರಿಲ್ 1 ಮೂರ್ಖರ ದಿನವನ್ನು ಕಾಂಗ್ರೆಸ್, ಜುಮ್ಲಾ ದಿವಸ್ ಎಂದು ಕರೆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟ ಬಿಜೆಪಿ ಏಪ್ರಿಲ್ ಫೂಲ್ ದಿವಸ ಅಲ್ಲ ಇದು ಪಪ್ಪು ದಿವಸ್ ಎಂದು ನಗೆಯಾಡಿದೆ.

2014ರ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೇರಿದರೆ ಕಪ್ಪು ಹಣವನ್ನು ನಿರ್ಮೂಲನೆ ಮಾಡಲಾಗುವುದು. ಕಪ್ಪು ಹಣವನ್ನು ಪತ್ತೆ ಹಚ್ಚಿದರೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಯಲ್ಲಿ ₹15 ಲಕ್ಷ ಹಣ ಬಂದು ಬೀಳುತ್ತದೆ ಎಂದು ಭರವಸೆ ನೀಡಿದ್ದರು. ಮೋದಿಯವರ ಈ ಸುಳ್ಳು ಭರವಸೆಯನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ ಕಾಂಗ್ರೆಸ್ #HappyJumlaDivas ಎಂಬ ಹ್ಯಾಶ್ ಟ್ಯಾಗ್ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT