ADVERTISEMENT

ಮೃಣಾಲಿನಿಗೆ ಗೂಗಲ್‌ ಡೂಡಲ್‌ ಗೌರವ

ಪಿಟಿಐ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಮೃಣಾಲಿನಿಗೆ ಗೂಗಲ್‌ ಡೂಡಲ್‌ ಗೌರವ
ಮೃಣಾಲಿನಿಗೆ ಗೂಗಲ್‌ ಡೂಡಲ್‌ ಗೌರವ   

ನವದೆಹಲಿ: ಹೆಸರಾಂತ ಶಾಸ್ತ್ರೀಯ ನೃತ್ಯದ ದಂತಕತೆ ಮೃಣಾಲಿನಿ ಸಾರಾಭಾಯಿ ಅವರ 100ನೇ ಜನ್ಮ ದಿನಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

1918ರ ಮೇ 11ರಂದು ಕೇರಳದಲ್ಲಿ ಜನಿಸಿದ್ದ ಮೃಣಾಲಿನಿ ಅವರು ಭರತನಾಟ್ಯ ಮತ್ತು ಕಥಕ್ಕಳಿ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆ ಅಪಾರ.

ಬಾಲ್ಯವನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಕಳೆದ ಅವರು, ಆಗಲೇ ಪಾಶ್ಚಿಮಾತ್ಯ ನೃತ್ಯ ಕಲೆ ಅಭ್ಯಸಿಸಿದ್ದರು. ನಂತರ ಶಾಂತಿನಿಕೇತನದಲ್ಲಿ ವಿದ್ಯಾಭ್ಯಾಸ ಮಾಡಿದರು. ಮೀನಾಕ್ಷಿ ಸುಂದರಂ ಪಿಳ್ಳೈ ಮತ್ತು ಥಾಕಝಿ ಕುಂಚು ಕುರುಪ್‌ ಅವರು ಭರತನಾಟ್ಯ ಹಾಗೂ ಕಥಕ್ಕಳಿ ಗುರುಗಳಾಗಿದ್ದರು.

ADVERTISEMENT

ಪತಿ, ಭಾರತ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್‌ ಸಾರಾಭಾಯಿ ಅವರ ಸಹಕಾರದೊಂದಿಗೆ 1949ರಲ್ಲಿ ‘ದರ್ಪಣ ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌’ ಸ್ಥಾಪಿಸಿದ್ದರು. ನೃತ್ಯಕ್ಕೆ ನೀಡಿದ ಸೇವೆಗಾಗಿ 1965ರಲ್ಲಿ ಪದ್ಮಶ್ರೀ ಮತ್ತು 1992ರಲ್ಲಿ ಪದ್ಮಭೂಷಣ ಗೌರವಗಳಿಗೆ ಪಾತ್ರರಾಗಿದ್ದರು.

ಮೃಣಾಲಿನಿ ಅವರು 2016ರ ಜನವರಿ 21ರಂದು ಅಹಮದಾಬಾದ್‌ನಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.