ರಾಂಚಿ (ಪಿಟಿಐ): ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರಾದ ಆರ್.ಕೆ.ರಾಣಾ ಹಾಗೂ ಧ್ರುವ ಭಗತ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಾದ ಓಂಪ್ರಕಾಶ ದಿವಾಕರ್ ಹಾಗೂ ಅಜಿತ್ ಕುಮಾರ್ ಸಿನ್ಹಾ ಅವರಿಗೂ ಇದೇ ಪ್ರಕರಣದಲ್ಲಿ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಖಜಾನೆ ಇಲಾಖೆಯ ಆರು ಅಧಿಕಾರಿಗಳು ಹಾಗೂ ಒಬ್ಬ ಮೇವು ಸಾಗಾಣಿಕೆದಾರನಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಸೀತಾರಾಮ ಪ್ರಸಾದ್ ಅವರು ಈ ಆರೋಪಿಗಳು ತಪ್ಪಿತಸ್ಥರು ಎಂದು ಮೇ 31ರಂದು ತೀರ್ಪು ನೀಡಿದ್ದರು. ಜೈಲು ಶಿಕ್ಷೆಯೊಂದಿಗೆ ರಾಣಾ, ಭಗತ್, ದಿವಾಕರ್ ಹಾಗೂ ಸಿನ್ಹಾ ಅವರಿಗೆ ್ಙ 2 ಲಕ್ಷ ದಂಡ ವಿಧಿಸಲಾಗಿದೆ. ದಂಡ ಭರಿಸಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.