ರಾಂಚಿ (ಪಿಟಿಐ): ಮೇವು ಹಗರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪರ ವಕೀಲರು ಸೋಮವಾರ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐನ ವಿಶೇಷ ನ್ಯಾಯಾಧೀಶ ಪ್ರವಾಸ್‌ಕುಮಾರ್ ಸಿಂಗ್ ಅವರು ಸದ್ಯಕ್ಕೆ ವಿಚಾರಣೆ ಮಾಡಬಾರದು ಹಾಗೂ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಲಾಲು ಪರ ವಕೀಲರು ಕೋರಿದ್ದಾರೆ.
ಪ್ರಕರಣದ ವರ್ಗಾವಣೆ ಕೋರಿ ಜಾರ್ಖಂಡ್‌ನ ಕೋರ್ಟ್‌ಗೆ ಲಾಲು ಅರ್ಜಿ ಸಲ್ಲಿಸಿದ್ದಾರೆ.
ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಸೇರಿದಂತೆ ಒಟ್ಟು 44 ಮಂದಿ ವಿರುದ್ಧ ಆರೋಪ ದಾಖಲಾಗಿದೆ. ಸಿಬಿಐನ ವಿಶೇಷ ನ್ಯಾಯಾಧೀಶ ಪ್ರವಾಸ್‌ಕುಮಾರ್ ಸಿಂಗ್ ಅವರಿಂದ ತಮಗೆ ನ್ಯಾಯ ದೊರೆಯಲಾರದು ಎಂದು ಅರ್ಜಿಯಲ್ಲಿ ಲಾಲು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.