ADVERTISEMENT

ಮೊಬೈಲ್‌: ಮಲಯಾಳ ಶಬ್ದ ಅಳವಡಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ತಿರುವನಂತಪುರ (ಐಎಎನ್‌ಎಸ್‌): ಕಂಪ್ಯೂಟರ್‌ ಹಾಗೂ ಮೊಬೈಲ್‌ ದೈನಂದಿನ ವ್ಯವಹಾರಗಳಲ್ಲಿ ಸಾಮಾನ್ಯ­ವಾಗಿ ಬಳಕೆಯಲ್ಲಿರುವ ಇಂಗ್ಲಿಷ್‌  ತಾಂತ್ರಿಕ ಪದಗಳಿಗೆ ಸಮಾನ ಅರ್ಥ ನೀಡುವ ಪರ್ಯಾಯ ಮಲಯಾಳಿ  ಶಬ್ದಗಳನ್ನು ಮೊಬೈಲ್‌­ಗಳಿಗೆ ಅಳವಡಿ­ಸುವ ಕಾರ್ಯಕ್ಕೆ ಸೋಮವಾರ ಕೇರಳದಲ್ಲಿ ಚಾಲನೆ ದೊರೆತಿದೆ. 
 
ಬ್ಲೂಟೂತ್, ಸ್ವೈಪಿಂಗ್, ಲೋಕೇ­ಶನ್‌ ಸರ್ವೀಸ್‌, ಆ್ಯಪ್ಸ್‌ ಮುಂತಾದ ತಾಂತ್ರಿಕ ಶಬ್ದಗಳಿಗೆ 500 ಪರ್ಯಾಯ ಪ್ರಾದೇಶಿಕ ಶಬ್ದಗಳನ್ನು ರೂಪಿಸ­ಲಾಗಿದೆ. ಇಲ್ಲಿಯವರೆಗೆ ಮಲಯಾಳ ಭಾಷೆ­ಯಲ್ಲಿ ಆಂಗ್ಲ  ತಾಂತ್ರಿಕ ಪದಗಳಿಗೆ ಸಮಾನ­ವಾದ ಪರ್ಯಾಯ ಶಬ್ದಗಳ ಬಳಕೆ ಚಾಲ್ತಿಯಲ್ಲಿ ಇರಲಿಲ್ಲ. 
 
ಭಾಷಾ ತಜ್ಞರು, ಶಿಕ್ಷಕರು, ಪ್ರಕಾಶ­ಕರು, ಮಾಧ್ಯಮ ಪ್ರತಿನಿಧಿಗಳು, ಭಾಷಾಂತ­ರ­ಕಾರರು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸೇರಿದಂತೆ 
ನೂರಾ­ರು ಜನ ಇದಕ್ಕೆ ಕೈಜೋಡಿಸಿದ್ದಾರೆ. 
 
ಆಂಡ್ರಾಯ್ಡ್‌, ಫೈರ್‌ಫಾಕ್ಸ್‌ ಒಎಸ್‌, ಐಫೋನ್‌ ಒಎಸ್‌ ಗ್ರಾಹಕರು ಮೊಬೈ­ಲ್‌­ನಲ್ಲಿ  ಪ್ರಾದೇಶಿಕ ಭಾಷೆ­ಯನ್ನು ಸುಲಭವಾಗಿ ಬಳಸಬಹುದಾಗಿದೆ. 
 
ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿ­ಸುವ ಕೇರಳದ  ಮೊಬೈಲ್‌ ಗ್ರಾಹಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ  ಇಂಗ್ಲಿಷ್‌ ಶಬ್ದಗಳ ಮಲ­ಯಾಳಂ ಭಾಷಾಂತರ ರೂಪವನ್ನು  ಮೊಬೈಲ್‌ಗಳಿಗೆ ಅಳವಡಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 
 
ಅಂತರರಾಷ್ಟ್ರೀಯ ಉಚಿತ ಮತ್ತು ಮುಕ್ತ ತಂತ್ರಾಂಶ ಕೇಂದ್ರ (ಐಸಿಎಫ್ಒ­ಎಸ್‌ಎಸ್‌) ದಿನ­ಬಳಕೆ­ಯಲ್ಲಿರುವ ಸಾಮಾನ್ಯ ಶಬ್ದಗಳನ್ನು ಪಟ್ಟಿ 
ಮಾಡಿ ಮೊಬೈಲ್‌ ತಂತ್ರಾಂಶಕ್ಕೆ ಅಳವಡಿಸಿದೆ. ಸ್ವತಂತ್ರ ಮಲೆಯಾಳಂ ಕಂಪ್ಯೂಟರ್‌ ತಂತ್ರಾಂಶ ಸಂಸ್ಥೆ ಹಾಗೂ ಹೆಚ್ಚು ಬಳಕೆಯಲ್ಲಿರುವ ಪದಗಳ ಪ್ರಾದೇಶಿಕರಣ ಯೋಜನೆ ಜಂಟಿಯಾಗಿ ಕೈಜೋಡಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.