ADVERTISEMENT

ಮೋದಿ ಭಾಷಣದಲ್ಲಿದ್ದ ತಪ್ಪು ಒಪ್ಪುಗಳೇನು?

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 15:45 IST
Last Updated 15 ಆಗಸ್ಟ್ 2016, 15:45 IST
ಮೋದಿ ಭಾಷಣದಲ್ಲಿದ್ದ ತಪ್ಪು ಒಪ್ಪುಗಳೇನು?
ಮೋದಿ ಭಾಷಣದಲ್ಲಿದ್ದ ತಪ್ಪು ಒಪ್ಪುಗಳೇನು?   

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ಮಾತನಾಡಿದ್ದರು.  ಕೇಂದ್ರ ಸರಕಾರದ ಯೋಜನೆಗಳು ಮತ್ತು ಫಲಾನುಭವಿಗಳ ಲೆಕ್ಕಗಳನ್ನೂ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೆ ಮೋದಿ ಹೇಳಿದ ಅಂಕಿ ಅಂಶಗಳು ಎಲ್ಲವೂ ಸರಿ ಇದೆಯೆ? ಅಥವಾ ಸುದೀರ್ಘ ಭಾಷಣದಲ್ಲಿ  ಮೋದಿ ತಮ್ಮ ಸಾಧನೆಯನ್ನು ವಿವರಿಸುವಾಗ ಭಾವೋದ್ವೇಗದಿಂದ ಈ ರೀತಿ ಹೇಳಿದರೆ? 

ಅಂದ ಹಾಗೆ ಭಾಷಣದಲ್ಲಿ ಮೋದಿ ಹೇಳಿದ್ದೇನು? ನಿಜ ಸಂಗತಿ ಏನು? ಅಂಕಿ ಅಂಶಗಳಲ್ಲಿರುವ ತಪ್ಪು ಒಪ್ಪುಗಳೇನು? ಎಂಬುದರ ಬಗ್ಗೆ ಬೆಳಕು ಚೆಲ್ಲುವ ಮಾಹಿತಿಗಳು ಇಲ್ಲಿವೆ.


ಮೋದಿ ಹೇಳಿದ್ದು:   ಈ ಹಿಂದೆ ಒಂದು ನಿಮಿಷದಲ್ಲಿ ಬರೀ 2000 ರೈಲ್ವೇ ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಈಗ ಪ್ರತೀ ನಿಮಿಷಕ್ಕೆ 15,000 ಟಿಕೆಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ.
ನಿಜಾಂಶ:  2014- 15 ರಲ್ಲಿ ಪ್ರತಿ ನಿಮಿಷಕ್ಕೆ 15,646 ಟಿಕೆಟ್ ಗಳನ್ನು ವಿತರಿಸಲಾಗುತ್ತಿತ್ತು. ಇದಕ್ಕಿಂತ ಮುನ್ನ 2012- 2013  ರಲ್ಲಿ ಪ್ರತಿ ನಿಮಿಷಕ್ಕೆ 16.021 ಟಿಕೆಟ್ ಗಳನ್ನು ವಿತರಿಸಲಾಗುತ್ತಿತ್ತು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.