ನವದೆಹಲಿ: ಆರು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಭಾನುವಾರ ವಿಸ್ತರಣೆಯಾಗಿದ್ದು 21 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಮಧ್ಯಾಹ್ನ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತನ ಸಚಿವರುಗಳಿಗೆ ಪ್ರಮಾಣ ವಚನ ಹಾಗೂ ಅಧಿಕಾರದ ಗೌಪ್ಯತೆ ಭೋಧಿಸಿದರು.
ನಾಲ್ವರು ಕ್ಯಾಬಿನೆಟ್ ದರ್ಜೆ ಸಚಿವರು, ಮೂವರು ಸ್ವತಂತ್ರ ಖಾತೆ ಸಚಿವರು ಹಾಗೂ 14 ರಾಜ್ಯ ಸಚಿವರು ಪ್ರಧಾನಿ ನರೇಂದ್ರ ಮೋದಿ ಸಂಪುಟವನ್ನು ಸೇರಿದ್ದಾರೆ.
ಕ್ಯಾಬಿನೆಟ್ ಸಚಿವರು: ಮನೋಹರ್ ಪರಿಕ್ಕರ್, ಸುರೇಶ್ ಪ್ರಭು ,ಜಗತ್ ಪ್ರಕಾಶ್ ನಡ್ಡಾ, ಚೌಧರಿ ಬಿರೇಂದ್ರ ಸಿಂಗ್.
ಸ್ವತಂತ್ರ ಖಾತೆ ಸಚಿವರು: ಬಂಡಾರು ದತ್ತಾತ್ರೇಯ ,ರಾಜೀವ್ ಪ್ರತಾಪ್ ರೂಢಿ ,ಡಾ.ಮಹೇಶ್ ಶರ್ಮಾ.
14 ಮಂದಿ ರಾಜ್ಯ ಸಚಿವರು : ಮುಖ್ತಾರ್ ಅಬ್ಬಾಸ್ ನಕ್ವಿ, ರಾಮ್ ಕೃಪಾಲ್ ಯಾದವ್, ಎಚ್.ಪಿ. ಚೌಧರಿ, ಸನ್ವರ್ ಲಾಲ್ ಜಾಟ್, ಮೋಹನ್‌ಭಾಯಿ ಕಲ್ಯಾಣ್‌ಜೀಭಾಯಿ, ಗಿರಿರಾಜ್ ಸಿಂಗ್, ಹಂಸರಾಜ್ ಅಹೀರ್, ರಾಮ್ ಶಂಕರ್ ಕಥಾರಿಯಾ, ಜಯಂತ್ ಸಿನ್ಹಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ಬಾಬುಲ್ ಸುಪ್ರಿಯೋ, ಸಾಧ್ವಿ ನಿರಂಜನ್ ಜ್ಯೋತಿ, ವಿಜಯ್ ಸಂಪಲ (ಎಲ್ಲರೂ ಬಿಜೆಪಿ ಸಂಸದರು) ವೈ.ಎಸ್ ಚೌಧರಿ (ಟಿಡಿಪಿ ಪಕ್ಷದ ರಾಜ್ಯಸಭಾ ಸದಸ್ಯ )
ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್,ಕೆ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.