ADVERTISEMENT

ಯುವತಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

ಲಖನೌ(ಐಎಎನ್‌ಎಸ್): ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಯುವಕನ ಪೋಷಕರು ಸಾರ್ವಜನಿಕರೆದುರೇ ಆತನ ಪ್ರೇಯಸಿಯನ್ನು ಸಜೀವ ದಹನ ಮಾಡಿದ ಬರ್ಬರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಲಖನೌನಿಂದ 475 ಕಿ.ಮೀ. ದೂರದ ಕಾರಕ್ಹೋಲ್ ಗ್ರಾಮದ ಡಿಯೋರಿಯಾದಲ್ಲಿ ಈ ಘಟನೆ ನಡೆದಿದೆ. ಯುವತಿಯ ತಾಯಿ ಕೂಡ ಹಲ್ಲೆಗೆ ಒಳಗಾಗಿದ್ದಾರೆ.

ಮಂಜು ಎಂಬ ಯುವತಿ ತನ್ನ ಊರಿನವನೇ ಆದ ರಂಜಿತ್ ಎಂಬಾತನ್ನು ಪ್ರೀತಿಸುತ್ತ್ದ್ದಿದಳು. ಆದರೆ ಇದಕ್ಕೆ ಆತನ ಕುಟುಂಬದವರ ವಿರೋಧವಿತ್ತು. ವಿಷಯ ಪಂಚಾಯಿತಿ ಕಟ್ಟೆವರೆಗೂ ಹೋಯಿತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದರಿಂದ ಅವರಿಗೆ ವಿವಾಹವಾಗಲು ಬಿಡಬೇಕು ಎಂದು ಮಂಜು ತಾಯಿ ಬೇಡಿಕೊಂಡರು. ಇದರಿಂದ ಕೋಪಗೊಂಡ ರಂಜಿತ್ ತಂದೆ ಹಾಗೂ ಕುಟುಂಬದವರು ಮಂಜು ತಾಯಿ ಜ್ಞಾನವತಿ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ತಾಯಿ ನೆರವಿಗೆ ಧಾವಿಸಿದ ಮಂಜು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಆಕೆ ಮೃತಪಟ್ಟಳು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.