ADVERTISEMENT

ರಜನಿಕಾಂತ್‌ ಟ್ವಿಟರ್‌ ಖಾತೆ ‘ಹ್ಯಾಕ್‌’

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2016, 19:30 IST
Last Updated 3 ಆಗಸ್ಟ್ 2016, 19:30 IST
ರಜನಿಕಾಂತ್‌   ಟ್ವಿಟರ್‌   ಖಾತೆ ‘ಹ್ಯಾಕ್‌’
ರಜನಿಕಾಂತ್‌ ಟ್ವಿಟರ್‌ ಖಾತೆ ‘ಹ್ಯಾಕ್‌’   

ಚೆನ್ನೈ (ಪಿಟಿಐ):  ಖ್ಯಾತ ತಮಿಳು ನಟ ರಜನಿಕಾಂತ್‌ ಅವರ ಟ್ವಿಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಆದರೆ, ನಂತರ ಸರಿಪಡಿಸಲಾಗಿದೆ ಎಂದು ರಜನಿಕಾಂತ್‌ ಪುತ್ರಿ ಐಶ್ವರ್ಯ ಹೇಳಿದ್ದಾರೆ.

‘ಅಪ್ಪನ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಎಲ್ಲರಿಗೂ ಧನ್ಯವಾದಗಳು’ ಎಂದು ಐಶ್ವರ್ಯ ಟ್ವೀಟ್‌ ಮಾಡಿದ್ದಾರೆ.  ಐಶ್ವರ್ಯ ಅವರ ಟ್ವೀಟ್‌ ಅನ್ನೇ ಅವರ ಸಹೋದರಿ ಸೌಂದರ್ಯ ರಜನಿಕಾಂತ್‌ ಅವರು ಮರು ಟ್ವೀಟ್‌ ಮಾಡಿದ್ದಾರೆ.

‘ಕಬಾಲಿ’ ಚಲನಚಿತ್ರದ ನಟ, ರಜನಿಕಾಂತ್‌ ಅವರ ಟ್ವಿಟರ್‌ ಖಾತೆಯನ್ನು ಮಂಗಳವಾರ ಹ್ಯಾಕ್‌ ಮಾಡಲಾಗಿತ್ತು. ಈ ಕುರಿತು ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ ಎಂದು ನಟನ ನಿಕಟವರ್ತಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.