ADVERTISEMENT

ರಾಜೇಶ್ ಖನ್ನಾ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ರಾಜೇಶ್ ಖನ್ನಾ ಆಸ್ಪತ್ರೆಗೆ
ರಾಜೇಶ್ ಖನ್ನಾ ಆಸ್ಪತ್ರೆಗೆ   

ಮುಂಬೈ (ಪಿಟಿಐ):  ಉದರ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಹಿರಿಯ ನಟ ರಾಜೇಶ್ ಖನ್ನಾ ಮುಂಬೈ ಹೊರವಲಯದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಶನಿವಾರ ದಾಖಲಾಗಿದ್ದಾರೆ.

69 ವರ್ಷದ ಖನ್ನಾ ಆರೋಗ್ಯ ಕೆಲವು ದಿನಗಳಿಂದ ಹದಗೆಟ್ಟಿದ್ದು, ವಿಚ್ಛೇದಿತ ಪತ್ನಿ ಡಿಂಪಲ್ ಕಪಾಡಿಯ ಆರೈಕೆ ಮಾಡುತ್ತಿದ್ದಾರೆ.  ಖನ್ನಾ ಅನಾರೋಗ್ಯದ ಸುದ್ದಿ ತಿಳಿದು ಅವರ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳತ್ತ ವಾರದ ಹಿಂದೆಯಷ್ಟೇ ವಿಜಯದ ಸಂಕೇತವಾಗಿ `ವಿ~ ಆಕಾರದಲ್ಲಿ ಬೆರಳು ಮಾಡಿ ತೋರಿಸಿದ್ದ ಖನ್ನಾ, ಶನಿವಾರ ಆಸ್ಪತ್ರೆಗೆ ಮತ್ತೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.