ADVERTISEMENT

ರಾಷ್ಟ್ರೀಯ ಲೋಕದಳ ವಿದಳ!

ನೂತನ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ ಅಜಯ್‌ಸಿಂಗ್‌ ಚೌತಾಲ

ಪಿಟಿಐ
Published 17 ನವೆಂಬರ್ 2018, 16:50 IST
Last Updated 17 ನವೆಂಬರ್ 2018, 16:50 IST
ಅಜಯ್‌ ಸಿಂಗ್‌
ಅಜಯ್‌ ಸಿಂಗ್‌   

ಜಿಂದ್, ಚಂಡೀಗಡ:ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಪಕ್ಷವು ಇಬ್ಭಾಗವಾಗಿದ್ದು, ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್‌ ಚೌಟಾಲಾ ಅವರ ಹಿರಿಯ ಮಗ ಅಜಯ್‌ ಸಿಂಗ್‌ ಚೌಟಾಲಾ ಹೊಸ ಪಕ್ಷ ಸ್ಥಾಪಿಸುವುದಾಗಿ ಶನಿವಾರ ಘೋಷಿಸಿದ್ದಾರೆ.

‘ಐಎನ್‌ಎಲ್‌ಡಿ ಮತ್ತು ಚಿಹ್ನೆಯನ್ನು (ಕನ್ನಡಕ) ನನ್ನ ತಮ್ಮನಿಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ’ ಎಂದು ಅಜಯ್‌ಸಿಂಗ್‌ ವ್ಯಂಗ್ಯವಾಗಿ ಹೇಳಿದ್ದಾರೆ. ಇತ್ತೀಚೆಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಅಜಯ್‌ ಮತ್ತು ಅವರ ಸಹೋದರ ಅಜಯ್‌ ಚೌಟಾಲಾ ಶನಿವಾರ ಪ್ರತ್ಯೇಕವಾಗಿ ಸಭೆ ನಡೆಸಿದರು.

ADVERTISEMENT

‘ನಾನು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿದಾಗ, ಪಕ್ಷದ ಮತ್ತೊಂದು ಸಭೆ ನಡೆಸುವುದು ಕಾನೂನಿಗೆ ವಿರುದ್ಧವಾದುದು’ ಎಂದು ಅಜಯ್‌ ಹೇಳಿದ್ದಾರೆ. ‘ಪಕ್ಷ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದವರೇ ಪಕ್ಷದಿಂದ ಹೊರಹೋಗಿದ್ದಾರೆ’ ಎಂದು ಅಭಯ್‌ ಹೇಳಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಂದೆ ಓಂಪ್ರಕಾಶ್‌ ಅವರೊಂದಿಗೆ ಅಜಯ್‌ ಕೂಡ 10 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ, ಅವರು ಎರಡು ವಾರ ಪೆರೋಲ್‌ ಮೇಲೆ ಹೊರಗಿದ್ದಾರೆ.ಜಿಂದ್‌ನಲ್ಲಿ ಡಿಸೆಂಬರ್‌ 9ರಂದು ನೂತನ ಪಕ್ಷದಿಂದ ರ‍್ಯಾಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.