ಆಗ್ರಾ (ಐಎಎನ್‌ಎಸ್): ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸೇವಕರಿಗೆ ಸಮರ್ಪಿಸುವುದಕ್ಕಾಗಿ ನಿರ್ಮಾಣಗೊಂಡಿರುವ ಮೊದಲ ರಾಷ್ಟ್ರ ಮಂದಿರವನ್ನು ಸೇನಾ ಪಡೆ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಭಾನುವಾರ ಉದ್ಘಾಟಿಸಿದರು.
ಮನಕಾಮೇಶ್ವರ್ ದೇವಾಲಯ ಸಂಕೀರ್ಣದಲ್ಲಿ ಗಾಂಧೀಜಿ, ಮದರ್ ತೆರೇಸಾ, ಭಗತ್ ಸಿಂಗ್ ಮುಂತಾದವರ ಹೆಸರಿನಲ್ಲಿ ಈ ವಿಶಿಷ್ಟ ದೇಗುಲ ಅಸ್ತಿತ್ವಕ್ಕೆ ಬಂದಿದೆ. `ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿ, ಯುವ ಪೀಳಿಗೆಗೆ ಅಂತಹವರ ಬಗ್ಗೆ ಪೂಜ್ಯ ಭಾವನೆ ಮೂಡಿಸುವಂತೆ ಮಾಡುವುದು ನಮ್ಮ ಕರ್ತವ್ಯ~ ಎಂದು ಮಂದಿರ ನಿರ್ಮಾಣಕ್ಕೆಕಾರಣರಾದ ಮಹಂತ್ ಹರ್‌ಹರ್ ಪುರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.