ನವದೆಹಲಿ (ಪಿಟಿಐ): ಸೇನಾಪಡೆಗೆ ಟಟ್ರಾ ಟ್ರಕ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ಟಟ್ರಾ ಸಿಪೋಕ್ಸ್ ಯುಕೆ ಹಾಗೂ ಬೆಮೆಲ್ ನಡುವೆ ಆದ ಒಪ್ಪಂದಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವೆಕ್ಟ್ರಾ ಮುಖ್ಯಸ್ಥ ರವೀಂದರ್ ರಿಷಿ ವಿರುದ್ಧ ಅಕ್ರಮ ಹಣ ಚಲಾವಣೆಯ ಪ್ರಕರಣ ದಾಖಲಿಸಿದೆ.
ಸಿಬಿಐ ಹಾಗೂ ಇತರ ಅಧಿಕೃತ ಮೂಲಗಳಿಂದ ಮಾಹಿತಿ ಪಡೆದಿರುವ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ರಿಷಿ ಹಾಗೂ ಇತರರನ್ನು ಈ ಸಂಬಂಧ ಪ್ರಶ್ನಿಸಲಿದೆ.
ಅಗತ್ಯ ಬಿದ್ದಲ್ಲಿ ಬೆಮೆಲ್ ಹಾಗೂ ರಕ್ಷಣಾ ಸಚಿವಾಲಯದಿಂದಲೂ `ಇಡಿ~ ವಿವರಣೆ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.