ಚಂಡೀಗಡ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೂ.10ರ ರ ಹೊಸ ನಾಣ್ಯವನ್ನು ಚಲಾವಣೆಗೆ ತರಲಿದೆ.
ನಾಣ್ಯದ ಮುಖಭಾಗದ ಮಧ್ಯದಲ್ಲಿ ಅಶೋಕ ಸ್ತಂಭದ ಉಬ್ಬುಶಿಲ್ಪ ಹಾಗೂ ಇನ್ನೊಂದು ಬದಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಲಾಂಛನವಾದ ತಾಳೆಮರ ಮತ್ತು ಹುಲಿಯ ಚಿತ್ರವಿದ್ದು, ಲಾಂಛನದ ಕೆಳಭಾಗದಲ್ಲಿ 1935-2011 ವರ್ಷವನ್ನು ನಮೂದಿಸಲಾಗಿರುತ್ತದೆ ಎಂದು ಆರ್ ಬಿ ಐ ಪ್ರಕಟಣೆ ತಿಳಿಸಿದೆ.
ಭಾರತ ಸರ್ಕಾರದ 1906ರ ನಾಣ್ಯ ಖಾಯ್ದೆಯ ಪರಿಚ್ಚೇದ 15 ಎ ಅನುಸಾರ 25 ಪೈಸೆಯ ನಾಣ್ಯದ ಚಲಾವಣೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, 2011ರ ಜೂನ್ 20ರಿಂದ ಇದು ಜಾರಿಗೆ ಬರಲಿದೆ, ಈ ನಾಣ್ಯದ ಬದಲಿ ನಾಣ್ಯವನ್ನು 2011ರ ಜುಲೈ 1ರ ಒಳಗೆ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.