ADVERTISEMENT

ರೈಲು ನಿಲ್ದಾಣಗಳಲ್ಲಿ ಸಿಗಲಿವೆ ಕಡಿಮೆ ದರದ ನ್ಯಾಪ್ಕಿನ್‌ ಮತ್ತು ಕಾಂಡೋಮ್‌

ಪಿಟಿಐ
Published 26 ಮೇ 2018, 6:38 IST
Last Updated 26 ಮೇ 2018, 6:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲು ನಿಲ್ದಾಣಗಳ ಶೌಚಾಲಯದ ಬದಿಯಲ್ಲಿ ಇನ್ನುಮುಂದೆ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಮತ್ತು ಕಾಂಡೋಮ್‌ಗಳ ಮಾರಾಟ ಆರಂಭಿಸಲು ರೈಲ್ವೆ ಮಂಡಳಿ ಹೊಸ ಶೌಚಾಲಯ ನೀತಿಯೊಂದನ್ನು ರೂಪಿಸಿದೆ.

ಶೌಚಾಲಯಗಳ ಬದಿಯಲ್ಲಿ ಸ್ವಯಂಚಾಲಿತ ಕಿಯೊಸ್ಕ್‌ ಯಂತ್ರ ಅಳವಡಿಸಿ, ಆ ಮೂಲಕ ನ್ಯಾಪ್ಕಿನ್‌ ಮತ್ತು ಕಾಂಡೋಮ್‌ ಮಾರಲು ಮಂಡಳಿ ಯೋಜಿಸಿದೆ.

ನಿಲ್ದಾಣಗಳ ಬದಿಯಲ್ಲಿನ ಪ್ರದೇಶದ ಜನರಲ್ಲಿ ಅರಿವಿನ ಕೊರತೆಯಿಂದ ಬಯಲು ಬಹಿರ್ದೆಸೆಗೆ ಬರುತ್ತಾರೆ. ಇದರಿಂದ ನಿಲ್ದಾಣದ ನೈರ್ಮಲ್ಯ ಕೆಡುತ್ತಿದೆ. ಹಾಗಾಗಿ ನಿಲ್ದಾಣದ ಹೊರಗೂ ಶೌಚಾಲಯಗಳನ್ನು ನಿರ್ಮಿಸಿ, ಕಿಯೊಸ್ಕ್‌ಗಳನ್ನು ಜೋಡಿಸಲು ಮಂಡಳಿ ನಿರ್ಧರಿಸಿದೆ.

ADVERTISEMENT

ಪ್ರಯಾಣಿಕರು ಮಾತ್ರವಲ್ಲದೇ, ನಿಲ್ದಾಣದ ಸುತ್ತಲಿನ ಪ್ರದೇಶದ ಜನರು ಸಹ ಈ ಅನುಕೂಲವನ್ನು ಬಳಸಿಕೊಳ್ಳಬಹುದಾಗಿದೆ.

ಪ್ರತಿ ಶೌಚಾಲಯದಲ್ಲಿ ಪುರುಷ, ಮಹಿಳಾ ಮತ್ತು ಅಂಗವಿಕಲರ ಪ್ರತ್ಯೇಕ ವಿಭಾಗಗಳು ಇರಲಿವೆ. ಇವುಗಳ ಶುಚಿತ್ವಕ್ಕೆ ಇಬ್ಬರು ಕಾರ್ಮಿಕರು, ಒಬ್ಬ ಮೇಲ್ವಿಚಾರಕ ಇರಲಿದ್ದಾರೆ. ಶೌಚಾಲಯದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಕಮೊಡ್‌ಗಳು ಇರಲಿವೆ.

ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿಯಡಿ 8,500 ನಿಲ್ದಾಣಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ಇಲ್ಲಿ ಬಿತ್ತರಿಸಲಾಗುವ ಜಾಹೀರಾತುಗಳಿಂದ ಬರುವ ವರಮಾನದಲ್ಲಿ ನಿರ್ವಹಣೆ ಮಾಡಲು ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.