ADVERTISEMENT

ರೈಲು ಪ್ರಯಾಣಕರಿಗೂ ಟಿವಿ ಸೌಲಭ್ಯ?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:40 IST
Last Updated 3 ಫೆಬ್ರುವರಿ 2011, 17:40 IST

ನವದೆಹಲಿ (ಪಿಟಿಐ):  ರೈಲ್ವೆ ಇಲಾಖೆ ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಪ್ರಯಾಣಿಕರು ಶೀಘ್ರವೇ  ತಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮ ಹಾಗೂ ಕ್ರಿಕೆಟ್ ಪಂದ್ಯದ ನೇರಪ್ರಸಾರವನ್ನು ರೈಲಿನಲ್ಲಿಯೇ ವೀಕ್ಷಿಸಬಹುದು.

ಈ ಸೌಲಭ್ಯವನ್ನು ಒದಗಿಸುವ ಕುರಿತು ಹಲವು ವರ್ತಕರೊಂದಿಗೆ ಉತ್ತರ ರೈಲ್ವೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಸೇವೆ ದೊರೆಯಲಿದೆ.

ಇಂತಹದ್ದೊಂದು ದೊಡ್ಡ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಪರೀಕ್ಷಾರ್ಥವಾಗಿ ಮಾರ್ಚ್ 1ರಿಂದ ದೆಹಲಿ-ಕಲ್ಕ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಯಲ್ಲಿ ಅಳವಡಿಸಲಾಗುವುದು. ಒಂದುವೇಳೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ಯಶಸ್ಸು ಕಂಡರೆ ಈ ಸೌಲಭ್ಯ ಒದಗಿಸುವ ವರ್ತಕರನ್ನು ಕರೆಸಿ ಮಾತುಕತೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲಿನ ಎಕ್ಸಿಕ್ಯೂಟಿವ್ ಕೋಚ್‌ನಲ್ಲಿರುವ ಸೀಟಿನ ಹಿಂಭಾಗದಲ್ಲಿ ಟಿವಿ ಪರದೆಗಳನ್ನು ಅಳವಡಿಸಲಾಗುವುದು. ಇದು ವಿಮಾನದಲ್ಲಿ ಪ್ರಯಾಣಿಸುವಾಗ ನೀಡುವ ಅನುಭವ ಒದಗಿಸಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.