ಲಖನೌ (ಐಎಎನ್‌ಎಸ್): ಚೆನ್ನೈನಿಂದ ಹೊರಟಿದ್ದ ದೆಹಲಿ ಗ್ರ್ಯಾಂಡ್ ಟ್ರಂಕ್ (ಜಿಟಿ) ಎಕ್ಸ್‌ಪ್ರೆಸ್ ರೈಲಿಗೆ ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ನುಗ್ಗಿ ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಘಟನೆ ಶನಿವಾರ ಆಗ್ರಾ ಸಮೀಪ ನಡೆದಿದೆ.
ರೈಲಿನ ಹವಾನಿಯಂತ್ರಿತ ಬೋಗಿ ನುಗ್ಗಿದ್ದ ಏಳು ಮಂದಿ ಡಕಾಯಿತರು ಬಂದೂಕಿನಿಂದ ಪ್ರಯಾಣಿಕರನ್ನು ಬೆದರಿಸಿ ನಗನಾಣ್ಯಗಳನ್ನು ದೋಚಿದ್ದಾರೆ.
ಪತ್ನಿ ಕೊಲೆ: ಜಡ್ಜ್ ವಿರುದ್ಧ ದೂರು
ಗುಡಗಾಂವ್ (ಐಎಎನ್‌ಎಸ್): ಹೆಂಡತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಜೆಎಂ ನ್ಯಾಯಾಧೀಶ ರವ್‌ನೀತ್ ಗರ್ಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರವ್‌ನೀತ್ ಅವರ ಪತ್ನಿ 24 ವರ್ಷದ ಗೀತಾಂಜಲಿ ಎರಡು ದಿನಗಳ ಹಿಂದೆ ಗುಂಡೇಟಿನಿಂದ ಕೊಲೆಯಾಗಿದ್ದರು. ಈ ಸಂಬಂಧ ಗೀತಾಂಜಲಿ ಅವರ ಸಹೋದರ ಪ್ರದೀಪ್ ಅಗರ್‌ವಾಲ್ ಅವರು ರವ್‌ನೀತ್ ಮತ್ತು ರವ್‌ನೀತ್ ಪೋಷಕರ ವಿರುದ್ಧ ಕೊಲೆ ದೂರು ನೀಡಿದ್ದರು.
ಗೀತಾಂಜಲಿ ಅವರ ಶವ ಗುರುವಾರ ಸಂಜೆ ಪತ್ತೆಯಾದ ಸಂದರ್ಭದಲ್ಲಿ ಹತ್ತಿರದಲ್ಲೇ ರವ್‌ನೀತ್ ಅವರ ಅಧಿಕೃತ ರಿವಾಲ್ವರ್ ಕೂಡ ಪತ್ತೆಯಾಗಿತ್ತು.
ಆಂಧ್ರಪ್ರದೇಶ ಮಾಜಿ ಸಚಿವ ನಿಧನ
ಹೈದರಾಬಾದ್ (ಐಎಎನ್‌ಎಸ್): ಆಂಧ್ರ ಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ. ವಿದ್ಯಾಧರ್ ರಾವ್ (65) ಶನಿವಾರ ಬೆಳಿಗ್ಗೆ ಗೋದಾವರಿ ಜಿಲ್ಲೆಯ ತಮ್ಮ ಎಲೂರು ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.