ADVERTISEMENT

ರೈಲ್ವೆ ಸುರಕ್ಷತೆ: ಅನುಷ್ಠಾನವಾಗದ ಶೇ 30 ಸುಧಾರಣಾ ಕ್ರಮಗಳು

ಪಿಟಿಐ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST

ನವದೆಹಲಿ: ರೈಲಿನಲ್ಲಿ ಸುರಕ್ಷತೆಗೆ ಸಂಬಂಧಿಸಿ ಅಧಿಕಾರಿಗಳು ಸೂಚಿಸಿದ ಸುಧಾರಣಾ ಕ್ರಮಗಳ ಪೈಕಿ ಶೇ 30ರಷ್ಟು ಅಂಶಗಳ ಬಗ್ಗೆ ಎಂಟು ತಿಂಗಳಾದರೂ ಗಮನ ಹರಿಸಿಯೇ ಇಲ್ಲ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

‘ಪ್ರಯಾಣಿಕರು ಮತ್ತು ಸರಕುಗಳ ಸುರಕ್ಷಿತ ಸಾಗಣೆಯೇ ನಮ್ಮ ಪ್ರಾಥಮಿಕ ಆದ್ಯತೆ. ಇದನ್ನು ಸಾಧಿಸುವ ದೃಷ್ಟಿಯಿಂದ, ಅಸುರಕ್ಷಿತ ರೂಢಿಗಳನ್ನು ಕೈಬಿಡಬೇಕು’ ಎಂದು ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ ಪತ್ರ ಬರೆದಿದ್ದಾರೆ.

‘ಸುರಕ್ಷತೆಯ ಸಂಸ್ಕೃತಿಯನ್ನು ಬೆಳೆಸಿ’ ಎಂದು ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ADVERTISEMENT

‘ನಿಯಮಗಳು ಹಾಗೂ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನದ ಕುರಿತು ಸುರಕ್ಷಾ ವಿಭಾಗವು ಮೇಲ್ವಿಚಾರಣೆ ನಡೆಸುವ ವೇಳೆ ಸುಧಾರಣಾ ಕ್ರಮಗಳನ್ನು ಪೂರೈಸದಿರುವುದು ತಿಳಿದುಬಂದಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

2017ರ ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಸುರಕ್ಷತೆ ಕೊರತೆಯ 5,070 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ನವೆಂಬರ್ 27ರವರೆಗೆ ಶೇ 70ರಷ್ಟು ಪ್ರಕರಣಗಳನ್ನು ಮಾತ್ರ ಬಗೆಹರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುರಕ್ಷೆಗೆ ಧಕ್ಕೆಯಾಗುವಂಥ ಶೇ 5ರಷ್ಟು ಪ್ರಕರಣಗಳು ಮೂರು ತಿಂಗಳುಗಳಿಂದ ಬಾಕಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.