ADVERTISEMENT

ಲಂಚದ ಆಮಿಷ: ಸಿಬಿಐಗೆ ದೂರು ನೀಡಿದ ಸೇನಾ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 8:45 IST
Last Updated 10 ಏಪ್ರಿಲ್ 2012, 8:45 IST

ನವ ದೆಹಲಿ (ಪಿಟಿಐ): ಭೂ ಸೇನೆಗೆ 600 ಕಳಪೆ ಗುಣಮಟ್ಟದ ವಾಹನಗಳ ಖರೀದಿಗೆ ಸಮ್ಮತಿಸಲು 14 ಕೋಟಿ ರೂಪಾಯಿಗಳ ಲಂಚದ ಆಮಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಇಂದು ಸಿಬಿಐಗೆ ದೂರು ನೀಡಿದ್ದಾರೆ.

ದೂರು ತಲುಪಿದ್ದು ಈ ಕುರಿತು ಪರಿಶೀಲಿಸಲಾಗುವುದು ಎಂದು ಸಿಬಿಐ ಮೂಲಗಳು ಹೇಳಿವೆ. ನಂತರ ಪ್ರಾಥಮಿಕ ತನಿಖೆ ಅಥವಾ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್ ಅವರು ವಾಹನ ಖರೀದಿಗೆ ಲಂಚದ ಆಮಿಷ ಒಡ್ಡಿದ್ದರು ಎಂದು ಜನರ್ ವಿ.ಕೆ.ಸಿಂಗ್ ಅವರು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಈ ಹೇಳಿಕೆ ಸದನದಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿದ್ದರಿಂದ ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.