ನವದೆಹಲಿ: ಲೋಕಸಭೆ ಚುನಾವ ಣೆಯ 63 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೈಂಗಿಕ ಅಲ್ಪ ಸಂಖ್ಯಾತರನ್ನು ಪುರುಷರು ಮತ್ತು ಮಹಿಳೆಯರಿಂದ ಪ್ರತ್ಯೇಕಿಸಿ, ಪ್ರತ್ಯೇಕ ವರ್ಗ ಎಂದು ಪರಿಗಣಿಸಲಾಗುವುದು. ದೇಶದಲ್ಲಿಯೇ ಈ ವರ್ಗದ ಹೆಚ್ಚು ಮತದಾರರು ಕರ್ನಾಟಕದಲ್ಲಿದ್ದಾರೆ.
ಫೆ. 2014ರ ವರೆಗಿನ ಮತದಾರರ ಪಟ್ಟಿಯ ಪ್ರಕಾರ ಈ ವರ್ಗಕ್ಕೆ ಸೇರಿದ ಮತದಾರರ ಸಂಖ್ಯೆ 28,341. ಇದು ದೇಶದ 81.45 ಕೋಟಿ ಮತದಾರರ ಶೇ 0.0035ರಷ್ಟು. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ‘ಇತರೆ’ ಲಿಂಗ ವರ್ಗಕ್ಕೆ ಸೇರಿದ ಮತದಾರರಿದ್ದಾರೆ.
ಅನಿವಾಸಿ ಮತದಾರರು: 1950ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸಂಸತ್, ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅವ ಕಾಶ ನೀಡಿದೆ. ಇದರಿಂದ ಭಾರತದಲ್ಲಿ ಈಗ 11,844 ಸಾಗರೋತ್ತರ ಮತದಾರರೂ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.