ADVERTISEMENT

ಲೋಕಪಾಲ ಸಮಿತಿ: ಧ್ವನಿಮುದ್ರಿಕೆ ಬಹಿರಂಗಕ್ಕೆ ಸರ್ಕಾರದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಲೋಕಪಾಲ ಮಸೂದೆಗೆ ಸಂಬಂಧಿಸಿದ ಜಂಟಿ ಕರಡು ರಚನಾ ಸಮಿತಿಯ ಕಲಾಪಗಳ ಧ್ವನಿಮುದ್ರಿಕೆಯನ್ನು ಬಹಿರಂಗಗೊಳಿಸಲು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಇದಕ್ಕೂ ಮೊದಲು ಧ್ವನಿಮುದ್ರಿಕೆಯನ್ನು ಬಹಿರಂಗಪಡಿಸಲು ನಿರಾಕರಿಸಿತ್ತು.

ನಾಗರಿಕ ಸಮಾಜ ಮತ್ತು ಸರ್ಕಾರದ ತಲಾ ಐವರು ಪ್ರತಿನಿಧಿಗಳನ್ನು ಒಳಗೊಂಡ ಕರಡು ರಚನಾ ಸಮಿತಿ ನಡೆಸಿದ್ದ ಕಲಾಪಗಳ ಧ್ವನಿ ಮುದ್ರಿಕೆ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರವಾಗಿ, ಕಾನೂನು ಇಲಾಖೆಯ ಸಲಹೆ ಕೇಳಲಾಗಿದೆ ಎಂದು ತಿಳಿಸಲಾಗಿತ್ತು.

ನಂತರ ಮನಸ್ಸು ಬದಲಾಯಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಗಳು, ಅರ್ಜಿದಾರ ಎಸ್.ಸಿ.ಅಗರವಾಲ್ ಅವರಿಗೆ ಧ್ವನಿಮುದ್ರಿಕೆ ಪ್ರತಿಗಳ ವೆಚ್ಚ 450 ರೂಪಾಯಿಯನ್ನು ಪಾವತಿಸುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.