ADVERTISEMENT

ವಿಕಿಲೀಕ್ಸ್ ಸಂಗತಿಯಲ್ಲಿ ವಿಶೇಷ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ವಿಕಿಲೀಕ್ಸ್ ಇತ್ತೀಚೆಗೆ ಬಹಿರಂಗಪಡಿಸಿರುವ ಸಂಗತಿಗಳು ಭಾರತ- ಅಮೆರಿಕ ನಡುವಿನ ರಾಜತಾಂತ್ರಿಕ ವಿನಿಮಯದ ಮಾಹಿತಿಗಳಿಂದಲೇ ಹೆಕ್ಕಿ ತೆಗೆದದ್ದಾಗಿದೆ. ಇದರಲ್ಲೇನೂ ವಿಶೇಷವಿಲ್ಲದಿದ್ದರೂ ಅಬ್ಬರದ ಪ್ರಚಾರ ನಡೆಯುತ್ತಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.

‘ವಿಕಿಲೀಕ್ಸ್ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಆದರೆ ಅದು ಜಾಹೀರು ಮಾಡಿದ ಅಂಶಗಳು ಮಾತ್ರ ರಾಜತಾಂತ್ರಿಕ ವಿನಿಯಮ ವಿಷಯಗಳಾಗಿದ್ದವು’ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT