ADVERTISEMENT

ವಿಚಾರಣೆಗೆ ಹಾಜರಾಗುವಂತೆ ಬನ್ಸಲ್ ಗೆ ಸಿಬಿಐ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 11:09 IST
Last Updated 4 ಜೂನ್ 2013, 11:09 IST

ನವದೆಹಲಿ (ಐಎಎನ್‌ಎಸ್):  ರೈಲ್ವೆ ಖಾತೆಯ ಮಾಜಿ ಸಚಿವ ಪವನ್ ಕುಮಾರ್ ಬನ್ಸಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮಂಗಳವಾರ ಸೂಚನೆ ನೀಡಿದೆ.

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್‌ನಲ್ಲಿ ಸೂಚಿಸಿದೆ ಎಂದು  ಉನ್ನತ  ಮೂಲಗಳು ತಿಳಿಸಿವೆ.

 ಬನ್ಸಾಲ್ ಅವರ ಸಂಬಂಧಿ 90 ಲಕ್ಷ ರೂಪಾಯಿ ಲಂಚ ಪಡೆದಿದ್ದು ಇದರಲ್ಲಿ ಬನ್ಸಾಲ್ ಅವರ ಪಾತ್ರವಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸಿಬಿಐನ ಉನ್ನತ ಮೂಲಗಳು ತಿಳಿಸಿವೆ.

ಈ ಲಂಚ ಪ್ರಕರಣದಲ್ಲಿ ಬನ್ಸಲ್ ಅವರ ಸಂಬಂಧಿ ವಿಜಯ್ ಸಿಂಗ್ಲಾ ಅವರ ಪಾತ್ರವಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬಳಿಕ ಬನ್ಸಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಹೇಶ್ ಕುಮಾರ್ ಎಂಬುವವರನ್ನು ರೈಲ್ವೆ  ನೇಮಕಾತಿ ಮಂಡಳಿಯ ಸದಸ್ಯನನ್ನಾಗಿ ನೇಮಕ ಮಾಡಲು ವಿಜಯ್ ಸಿಂಗ್ಲಾ  90 ಲಕ್ಷ ರೂ ಲಂಚ ಪಡೆದಿದ್ದರು ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.