ADVERTISEMENT

ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆಯೇ? ಕಾಂಗ್ರೆಸ್ ಟ್ವಿಟ್‌ ಅನ್ನು ರಿಟ್ವೀಟ್ ಮಾಡಿದ ಸುಷ್ಮಾ ಸ್ವರಾಜ್

ಏಜೆನ್ಸೀಸ್
Published 27 ಮಾರ್ಚ್ 2018, 12:32 IST
Last Updated 27 ಮಾರ್ಚ್ 2018, 12:32 IST

ನವದೆಹಲಿ: ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ ವಿಚಾರದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆಯೇ? ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ನಡೆಸಿದ್ದ ಸಮೀಕ್ಷೆಯ ಫಲಿತಾಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ರಿಟ್ವೀಟ್ ಮಾಡಿದ್ದಾರೆ.

ಈ ಸಮೀಕ್ಷೆಯ ಫಲಿತಾಂಶವು ಸುಷ್ಮಾ ಪರವಾಗಿಯೇ ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾದಂತಾಗಿದೆ.

‘ಇರಾಕ್‌ನಲ್ಲಿ 39 ಭಾರತೀಯರ ಹತ್ಯೆ ವಿಚಾರದಲ್ಲಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ವಿಫಲರಾಗಿದ್ದಾರೆ ಎಂದು ನೀವು ಭಾವಿಸಿದ್ದೀರಾ’ ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಸುಷ್ಮಾ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲು ಪ್ರಶ್ನೆ ಕೇಳಿತ್ತು.

ADVERTISEMENT

ಈ ಸಮೀಕ್ಷೆಯಲ್ಲಿ 39,879 ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲಿ ಶೇ 76ರಷ್ಟು ಮಂದಿ ‘ಇಲ್ಲ’ ಎಂದಿದ್ದರೆ, ಶೇ 24ರಷ್ಟು ಮಂದಿ ‘ಹೌದು’ ಎಂದು ಹೇಳಿದ್ದಾರೆ. ಸಮೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸುಷ್ಮಾ, ಅದನ್ನು ರಿಟ್ವೀಟ್ ಮಾಡಿದ್ದಾರೆ.

39 ಜನರ ಹತ್ಯೆ ವಿಚಾರದ ಬಗ್ಗೆ ಸಮೀಕ್ಷೆ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ಮತ್ತು  ಸುಷ್ಮಾ,  ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.