ADVERTISEMENT

ವಿದೇಶಿ ಕರೆನ್ಸಿ ಕಳ್ಳಸಾಗಣೆಗೆ ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST

ನವದೆಹಲಿ: ₹ 2.94 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದಲ್ಲಿ ದುಬೈ ಪ್ರಯಾಣಿಕರೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

‘ದೆಹಲಿಯಿಂದ ದುಬೈಗೆ ಹೊರಟಿದ್ದ ಪ್ರಯಾಣಿಕನ ಭಾರತ ಭೇಟಿ ಉದ್ದೇಶ ಕೇಳಿದಾಗ ನೀಡಿದ ಉತ್ತರದಿಂದ ಅನುಮಾನಗೊಂಡು ಆತನ ಬ್ಯಾಗ್‌ ಪರಿಶೀಲಿಸಲಾಯಿತು. 14 ಸೀರೆಗಳ ನಡುವೆ ಬಚ್ಚಿಟ್ಟಿದ್ದ ವಿದೇಶಿ ಕರೆನ್ಸಿ ಪತ್ತೆಯಾಯಿತು’ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಗ್‌ ಮತ್ತು ವಿಮಾನ ಪ್ರಯಾಣದ ಟಿಕೆಟ್‌ ಅನ್ನು ದೆಹಲಿಯ ಟ್ರಾವೆಲ್ ಏಜೆಂಟ್‌ ಒಬ್ಬರು ನೀಡಿದ್ದಾರೆ. ಈ ಹಿಂದೆ ಮೂರು ಬಾರಿ ಇದೇ ಏಜೆಂಟ್‌ ನೀಡಿದ ವಿದೇಶಿ ಕರೆನ್ಸಿಯನ್ನು ದುಬೈಗೆ ಸಾಗಿಸಿರುವುದಾಗಿ ಪ್ರಯಾಣಿಕ ಒಪ್ಪಿಕೊಂಡಿದ್ದಾರೆ. ಆ ಟ್ರಾವೆಲ್ ಏಜೆಂಟ್‌ನನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.