ಕಾನ್ಪುರ (ಪಿಟಿಐ): ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಇಬ್ಬರು ವಿದ್ಯಾರ್ಥಿಗಳು ವರ್ಷಕ್ಕೆ ತಲಾ ₨1.20 ವೇತನ ಪಡೆಯಲಿದ್ದಾರೆ.
ಸಂಸ್ಥೆಯಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಐಟಿ ದಿಗ್ಗಜ ಒರಾಕಲ್ ಕಂಪೆನಿಯು ಇಬ್ಬರು ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ವೇತನ ನೀಡಲು ಮುಂದೆ ಬಂದಿದೆ.
ಸುಮಾರು 50 ಕಂಪೆನಿಗಳು ನೇಮಕಾತಿ ಪ್ರಕ್ರಿಯೆ ಯಲ್ಲಿ ಭಾಗವಹಿಸಿವೆ. ಭಾನುವಾರ ಆರಂಭ ಗೊಂಡಿ ರುವ ಪ್ರಕ್ರಿಯೆ ಡಿ.22ರ ವರೆಗೆ ಮುಂದುವರಿಯಲಿದೆ. ಈ ಇಬ್ಬರ ಹೊರತಾಗಿ ಇತರ 78 ವಿದ್ಯಾರ್ಥಿಗಳು ವಾರ್ಷಿಕ ₨8ರಿಂದ ₨24ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.