ADVERTISEMENT

ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಶೀಘ್ರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಶೀಘ್ರ
ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಶೀಘ್ರ   

ನವದೆಹಲಿ: ಹಾರುತ್ತಿರುವ ವಿಮಾನದಲ್ಲಿ ಮೊಬೈಲ್‌ ಮತ್ತು ಅಂತರ್ಜಾಲ ಸಂಪರ್ಕ ಪಡೆಯಲು ಶೀಘ್ರವೇ ಅವಕಾಶ ದೊರೆಯಲಿದೆ. ಈ ಬಗ್ಗೆ ಈ ತಿಂಗಳ ಕೊನೆಯೊಳಗೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಾಗುವುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಧ್ಯಕ್ಷ ಆರ್‌.ಎಸ್. ಶರ್ಮಾ ಅವರು ಹೇಳಿದ್ದಾರೆ. 

‘ವಿಮಾನದೊಳಗೆ ಅಂತರ್ಜಾಲ ಸಂಪರ್ಕ ಪಡೆಯಲು ಅವಕಾಶ ನೀಡಲಾಗುವುದು. ಶಿಫಾರಸಿನಲ್ಲಿ ಅದಕ್ಕೆ ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಕೊಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಬೇಕು ಎಂಬ ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗಾಗಿ ನಾಗರಿಕ ವಿಮಾನಯಾನ ಉದ್ಯಮಕ್ಕೆ ಸಂಬಂಧಿಸಿದವರ ಅಭಿಪ್ರಾಯಗಳನ್ನು ಟ್ರಾಯ್‌ ಸಂಗ್ರಹಿಸಿದೆ.

ADVERTISEMENT

ಟ್ರಾಯ್‌ನ ಶಿಫಾರಸು ಆಧರಿಸಿ ದೂರಸಂಪರ್ಕ ಸಚಿವಾಲಯವು ನಿಯಮಗಳನ್ನು ರೂಪಿಸಲಿದೆ. ಇದು ಈ ತಿಂಗಳ ಕೊನೆಗೆ ಜಾರಿಯಾಗುವ ಸಾಧ್ಯತೆ ಹೆಚ್ಚು. ಒಂದು ವೇಳೆ ವಿಳಂಬವಾದರೂ 2018ರ ಮಾರ್ಚ್‌ನೊಳಗೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.