ADVERTISEMENT

ವಿವಾಹ ವಿಚ್ಛೇದನ ಪ್ರತೀಕಾರಕ್ಕಾಗಿ ಬುದ್ಧ ವಿಗ್ರಹ ಕಳವು?

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 8:37 IST
Last Updated 6 ಜೂನ್ 2017, 8:37 IST
ವಿವಾಹ ವಿಚ್ಛೇದನ ಪ್ರತೀಕಾರಕ್ಕಾಗಿ ಬುದ್ಧ ವಿಗ್ರಹ ಕಳವು?
ವಿವಾಹ ವಿಚ್ಛೇದನ ಪ್ರತೀಕಾರಕ್ಕಾಗಿ ಬುದ್ಧ ವಿಗ್ರಹ ಕಳವು?   

ನವದೆಹಲಿ: ವಿವಾಹ ವಿಚ್ಛೇದನ ನೀಡಿದ ಪತ್ನಿಯ ಕುಟುಂಬದ ವಿರುದ್ಧ ಪ್ರತೀಕಾರಕ್ಕಾಗಿ 900 ವರ್ಷಗಳಷ್ಟು ಹಳೆಯದೆನ್ನಲಾದ ಬುದ್ಧ ವಿಗ್ರಹವನ್ನು ಕಳವು ಮಾಡಿದ ಟಿಬೆಟಿಯನ್ ಮೂಲದ ಯುವಕ ಮತ್ತು ಆತನ ಸ್ನೇಹಿತೆಯನ್ನು ಬಂಧಿಸಲಾಗಿದೆ.

ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿರುವ ಸಂಗೇಲಿಂಗ್ ಗೊಂಪಾದ ಮುಖ್ಯಸ್ಥ ಚೀಪಾ ಮನೆಯಿಂದ ಈ ಜೋಡಿ ಟಿಬೆಟಿಯನ್ ಬೌದ್ಧ ಸನ್ಯಾಸಿಯಾದ ಪೇಮಾ ಲಿಂಗ್ಪಾ ವಿಗ್ರಹವನ್ನು ಕದ್ದಿದ್ದರು.

ಸೋಮವಾರ ದೆಹಲಿಯ ಮಜ್ನು ಕಾ ಟಿಲ್ಲಾ ಪ್ರದೇಶದಲ್ಲಿ  ವಿಗ್ರಹ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ADVERTISEMENT

ವಿಗ್ರಹವನ್ನು ಮಾರಿ ವಿವಾಹ ವಿಚ್ಛೇದನ ನೀಡಿದ ಪತ್ನಿ ವಿರುದ್ಧ ಪ್ರತೀಕಾರ ಮಾಡಬೇಕು ಮತ್ತು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕಳ್ಳತನ ಮಾಡಲಾಗಿದೆ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.