ADVERTISEMENT

ವಿಶ್ವಸಂಸ್ಥೆ ವರದಿ ತಿರಸ್ಕರಿಸಿದ ಭಾರತ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 6:22 IST
Last Updated 15 ಜೂನ್ 2018, 6:22 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಂತರರಾಷ್ಟ್ರೀಯ ತನಿಖೆ ಆಗಬೇಕು ಎಂದು ಹೇಳಿದೆ.

ಆದರೆ, ಭಾರತ ಸರ್ಕಾರ ಈ ವರದಿಯನ್ನು ತಿರಸ್ಕರಿಸಿದೆ. ಇದು ‘ದೋಷಪೂರಿತ, ದುರುದ್ದೇಶಪೂರಿತ ಮತ್ತು ಒಳ ಉದ್ದೇಶಗಳನ್ನು’ ಹೊಂದಿರುವ ವರದಿ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಹೋಲಿಸಿದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಿನ್ನ ರೀತಿ ಮತ್ತು ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ವರದಿ ಹೇಳಿದೆ.

ADVERTISEMENT

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯು ಈ ವರದಿಯನ್ನು ಸಿದ್ಧಪಡಿಸಿದೆ. ಪಿಒಕೆಯಲ್ಲಿರುವ ಜನರಿಗೆ ಪಾಕಿಸ್ತಾನದ ಸಂವಿಧಾನವು ನೀಡಿರುವ ಎಲ್ಲ ಹಕ್ಕು ಗಳು ಮತ್ತು ರಕ್ಷಣೆ ದೊರೆಯುವುದಿಲ್ಲ. ಪಿಒಕೆಯಲ್ಲಿ ಸ್ಥಳೀಯ ಸರ್ಕಾರ ಇದ್ದರೂ ಅದರ ಮೇಲೆ ಪಾಕಿಸ್ತಾನ ಸರ್ಕಾರ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ವರದಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಹಿಂದಿಗಿಂತ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಯುವಕರು, ಮಹಿಳೆಯರು ಮತ್ತು ಮಧ್ಯಮ ವರ್ಗದ ಜನರೂ ಇದರಲ್ಲಿ ಸೇರಿದ್ದಾರೆ. ಭಾರತದ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗ ನಡೆಸುತ್ತಿವೆ. ಇದು ಹತ್ಯೆ ಮತ್ತು ಗಂಭೀರ ಗಾಯಗಳಿಗೆ ಕಾರಣವಾಗುತ್ತಿದೆ. ಅಪಾಯಕಾರಿಯಾದ ಪೆಲೆಟ್‌ ಬಂದೂಕು ಬಳಸಲಾಗುತ್ತಿದೆ ಎಂದೂ ವರದಿ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.